ಭಾನುವಾರ, ಸೆಪ್ಟೆಂಬರ್ 19, 2021
27 °C

ಕೋಲಾರ ಕೆರೆಗಳಲ್ಲಿ ಅಧಿಕ ಲೋಹ, ಐಐಎಸ್ಸಿ ವರದಿಗೆ ಕೆ.ಆರ್‌.ರಮೇಶ್‌ ಕುಮಾರ್ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆ.ಸಿ. ವ್ಯಾಲಿ ಯೋಜನೆಯ ಮೂಲಕ ಕೋಲಾರದ ಕೆರೆಗಳಿಗೆ ಬೆಳ್ಳಂದೂರು ಚರಂಡಿ ಸಂಸ್ಕರಣ ಘಟಕದಿಂದ (ಎಸ್‌ಟಿಪಿ) ಬಿಡುತ್ತಿರುವ ನೀರಿನಲ್ಲಿ ಅಧಿಕ ಪ್ರಮಾಣದ ಲೋಹದ ಅಂಶಗಳು ಇವೆ ಎಂಬ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ವರದಿಗೆ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಐಐಎಸ್‌ಸಿಯ ಸಂಶೋಧಕ ಟಿ.ವಿ ರಾಮಚಂದ್ರ ಅವರನ್ನು ಒಳಗೊಂಡ ತಂಡ ಶುಕ್ರವಾರ ಹೈಕೋರ್ಟ್‌ಗೆ ವರದಿ ಸಲ್ಲಿಸಿತ್ತು. ಕೋಲಾರದ ಲಕ್ಷ್ಮೀಸಾಗರ, ನರಸಾಪುರ ಕೆರೆಗಳಲ್ಲಿ ಮಿತಿಗಿಂತ ಹೆಚ್ಚಿನ ಲೋಹದ ಅಂಶಗಳು ಇವೆ ಎಂಬ ಅಂಶ ವರದಿಯಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು