ಬೆಂಗಳೂರು: ಆಧಾರ್ ಕಾರ್ಡ್‌ಗೆ ಪರದಾಟ

7

ಬೆಂಗಳೂರು: ಆಧಾರ್ ಕಾರ್ಡ್‌ಗೆ ಪರದಾಟ

Published:
Updated:
Deccan Herald

ಹೊಸಕೋಟೆ: ಹೊಸದಾಗಿ ಆಧಾರ್ ಕಾರ್ಡ್‌ ಮಾಡಿಸಲು ಮತ್ತು ಅದರಲ್ಲಿನ ತಪ್ಪುಗಳನ್ನು ತಿದ್ದುಪಡಿ ಮಾಡಿಸಲು ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ತಾಲ್ಲೂಕಿನ ನಾಗರಿಕರು ಪರದಾಡುವಂತಾಗಿದೆ.

ಈ ಹಿಂದೆ ಆಧಾರ್ ಕಾರ್ಡ್ ಅನ್ನು ತಾಲ್ಲೂಕು ಕಚೇರಿ, ನಾಡ ಕಚೇರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಮಾಡಿಸಬಹುದಿತ್ತು. ಹಲವಾರು ತಿಂಗಳಿಂದ ಅದು ನಿಂತಿದ್ದು ಸರ್ಕಾರ ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್ ಶಾಖೆಗಳಿಗೆ ಅವಕಾಶ ಕಲ್ಪಿಸಿರುವುದೇ ಸಮಸ್ಯೆ ಬಿಗಡಾಯಿಸಲು ಕಾರಣ ಎಂದು ನಾಗರಿಕರು ದೂರಿದ್ದಾರೆ.

ಕಾರ್ಯ ಒತ್ತಡದಿಂದ ಈ ಬ್ಯಾಂಕ್ ಗಳಲ್ಲಿ ಪ್ರತಿ ದಿನ ಕೇವಲ 12 ರಿಂದ 15 ಜನಕ್ಕೆ ಮಾತ್ರ ನೋಂದಣಿ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆ ಪರಿಹರಿಸುತ್ತಿದ್ದಾರೆ. ಕೆಲವು ದಿನ ತಾಂತ್ರಿಕ ಸಮಸ್ಯೆಗಳಿಂದ ನೋಂದಣಿ ಕೆಲಸ ಸಹ ಸ್ಥಗಿತಗೊಳ್ಳುತ್ತಿದೆ. ಬ್ಯಾಂಕ್‌ಗಳ ಮುಂದೆ ಸರದಿ ಕಾಯುವುದೇ ಕೆಲಸವಾಗಿದೆ ಎಂದು ನಾಗರಿಕರು ಹೇಳಿದರು.

ಚೀಟಿ ಪಡೆಯಲು ನೂಕು ನುಗ್ಗಲು ಉಂಟಾದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮಧ್ಯ ಪ್ರವೇಶಿಸಬೇಕಾದ ಪ್ರಸಂಗ ಸೋಮವಾರ ನಡೆಯಿತು.

ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ತರಬೇತಿ ಕೊಟ್ಟಿದ್ದರೂ ಅಲ್ಲಿ ಆಧಾರ್ ನೋಂದಣಿ ಕಾರ್ಯ ಪ್ರಾರಂಭವಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ತಾಲ್ಲೂಕು ಕಚೇರಿಯಲ್ಲಿ ನೋಂದಣಿ ಕೆಲಸ ಆರಂಭಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಗ್ರೇಡ್–2 ತಹಶೀಲ್ದಾರ್ ಚಂದ್ರಶೇಖರ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !