ಯರಲಕ್ಕೇನಹಳ್ಳಿ: ವಿಷ ಸೇವಿಸಿ ರೈತ ಆತ್ಮಹತ್ಯೆ

2

ಯರಲಕ್ಕೇನಹಳ್ಳಿ: ವಿಷ ಸೇವಿಸಿ ರೈತ ಆತ್ಮಹತ್ಯೆ

Published:
Updated:
Deccan Herald

ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿಯ ಯರಲಕ್ಕೇನಹಳ್ಳಿ ರೈತ ಲಕ್ಷ್ಮಯ್ಯ (55) ಅವರು ಬೆಳಿಗ್ಗೆ 8.30ರ ಸುಮಾರಿಗೆ ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರಿಗೆ ಒಬ್ಬ ಮಗ, ಮೂರು ಪುತ್ರಿಯರಿದ್ದಾರೆ. ಹೆಣ್ಣು ಮಕ್ಕಳ ಮದುವೆಯಾಗಿದೆ. ಒಂದೂವರೆ ತಿಂಗಳ ಹಿಂದಷ್ಟೇ ಲಕ್ಷ್ಮಯ್ಯ ಅವರ ಪತ್ನಿ ಮೃತಪಟ್ಟಿದ್ದರು.

ಯರಲಕ್ಕೇನಹಳ್ಳಿಗೆ ಭೇಟಿ ನೀಡಿ ಪರಿಶೀಲಿಸಿದ ಗುಡಿಬಂಡೆ ತಹಶೀಲ್ದಾರ್ ಮುನಿರಾಜು, ‘ಮೃತ ಲಕ್ಷ್ಮಯ್ಯ ಅವರಿಗೆ ಎರಡೂವರೆ ಎಕರೆ ಜಮೀನಿದೆ. ಇತ್ತೀಚೆಗೆ ಕೊಳವೆಬಾವಿ ವಿಫಲಗೊಂಡಿತ್ತು. ಕೆನರಾ ಬ್ಯಾಂಕಿನ ಬೀಚಗಾನಹಳ್ಳಿ ಶಾಖೆಯಲ್ಲಿ ₹1.50 ಲಕ್ಷ ಸಾಲವಿತ್ತು. ಜತೆಗೆ ಕೆಲವರ ಬಳಿ ಕೈಸಾಲ ಕೂಡ ಮಾಡಿದ್ದರು’ ಎಂದು ಮೃತರ ಸಹೋದರ ಹೇಳಿಕೆ ನೀಡಿದ್ದಾರೆ. ಸಾವಿನ ನಿಖರ ಕಾರಣ ತನಿಖೆಯ ನಂತರವಷ್ಟೇ ತಿಳಿದು ಬರಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !