ವೆಂಕಟೇಶ್ ಪ್ರಸಾದ್ ನಂಗರಹಾರ್ ಲೆಪರ್ಡ್ಸ್‌ ತಂಡದ ಬೌಲಿಂಗ್ ಕೋಚ್

7

ವೆಂಕಟೇಶ್ ಪ್ರಸಾದ್ ನಂಗರಹಾರ್ ಲೆಪರ್ಡ್ಸ್‌ ತಂಡದ ಬೌಲಿಂಗ್ ಕೋಚ್

Published:
Updated:

ಶಾರ್ಜಾ: ಭಾರತದ ಹಿರಿಯ ಕ್ರಿಕೆಟಿಗ, ಬೆಂಗಳೂರಿನ ವೆಂಕಟೇಶ್ ಪ್ರಸಾದ್ ಅವರು ಅಫ್ಗಾನಿಸ್ತಾನ ಪ್ರೀಮಿಯರ್ ಲೀಗ್ (ಎಪಿಎಲ್)ನಲ್ಲಿ ಆಡಲಿರುವ ನಂಗರಹಾರ್ ಲೆಪರ್ಡ್ಸ್‌ ತಂಡದ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ.

ಇದೇ 5ರಿಂದ ನಡೆಯಲಿರುವ ಟೂರ್ನಿಯಲ್ಲಿ ನಂಗರಹಾರ್ ಲೆಪರ್ಡ್ಸ್, ಕಾಬೂಲ್ ಜವಾನನ್, ಪಾಕಿಟಾ ಪ್ಯಾಂಥರ್ಸ್, ಬಾಲ್ಕ್ ಲೆಜೆಂಡ್ಸ್, ಕಂದಹಾರ್ ನೈಟ್ಸ್‌ ತಂಡಗಳು ಆಡಲಿವೆ.

ವೆಸ್ಟ್ ಇಂಡೀಸ್ ತಂಡದ ಆ್ಯಂಡ್ರೆ ರಸೆಲ್ ಅವರು ನಂಗರಹಾರ್ ತಂಡದ ನಾಯಕತ್ವ ವಹಿಸುವರು. ಅಫ್ಗನ್ ಕ್ರಿಕೆಟಿಗ ರಶೀದ್ ಖಾನ್ ಅವರು ಕಾಬುಲ್ ಜವಾನನ್ ತಂಡದ ಸಾರಥ್ಯ ವಹಿಸುವರು. ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರು ಪಾಕಿಟಾ ಪ್ಯಾಂಥರ್ಸ್‌ ಬಳಗಕ್ಕೆ ಮತ್ತು ಅಫ್ಗನ್ ಕ್ರಿಕೆಟ್ ಆಟಗಾರ ಮೊಹಮ್ಮದ್ ನಬಿ ಅವರು ಬಾಲ್ಕ್‌ ಲೆಜಂಡ್ಸ್‌ಗೆ ನಾಯಕತ್ವ ವಹಿಸುವರು.

 ‘ಡಿ ಸ್ಪೋರ್ಟ್ಸ್‌’ ಟಿ.ವಿ. ವಾಹಿನಿಯು ಈ ಟೂರ್ನಿಯ ನೇರಪ್ರಸಾರ ಮಾಡಲಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !