ಎಚ್‌.ಡಿ.ಕೋಟೆ: ಉಗ್ರಾಣದಲ್ಲಿ ತುಕ್ಕು ಹಿಡಿಯುತ್ತಿವೆ ಸೈಕಲ್‌ಗಳು

7
ಆರು ಬಿಇಒಗಳ ವಿರುದ್ಧ ನಿವೃತ್ತ ನ್ಯಾಯಾಧೀಶರಿಂದ ತನಿಖೆ

ಎಚ್‌.ಡಿ.ಕೋಟೆ: ಉಗ್ರಾಣದಲ್ಲಿ ತುಕ್ಕು ಹಿಡಿಯುತ್ತಿವೆ ಸೈಕಲ್‌ಗಳು

Published:
Updated:
Deccan Herald

ಎಚ್.ಡಿ.ಕೋಟೆ: ಸರ್ಕಾರ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ನೀಡಿರುವ ಸೈಕಲ್‌ಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಗ್ರಾಣದಲ್ಲಿ ತುಕ್ಕು ಹಿಡಿಯುತ್ತಿವೆ.

ಇಲ್ಲಿನ ಎರಡು ಉಗ್ರಾಣದಲ್ಲಿ 152 ಸೈಕಲ್‌ಗಳು ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿ ಇರುವ ಕುರಿತು 6 ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ತನಿಖೆ ನಡೆಯುತ್ತಿದೆ.

ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಎಂ.ಉದಯ್ ಕುಮಾರ್ ಅವರು ಉಗ್ರಾಣದಲ್ಲಿ ಬಿದ್ದಿರುವ ಸೈಕಲ್‌ಗಳನ್ನು ನೋಡಿ, ಸ್ಥಳೀಯ ಸಿಬ್ಬಂದಿಯಿಂದ ಮಾಹಿತಿ ಪಡೆದು ಇಲಾಖೆ ಆಯುಕ್ತರಿಗೆ 2014ರ ಜ.1ರಂದು ದೂರು ನೀಡಿದ್ದರು. ಹಿಂದಿನ ಬಿಇಒಗಳ ನಿರ್ಲಕ್ಷ್ಯದಿಂದು,ಸೈಕಲ್‌ಗಳನ್ನು ಸೂಕ್ತ ನಿರ್ವಹಣೆ ಮಾಡದೆ ಉಗ್ರಾಣದಲ್ಲಿ ಸಂಗ್ರಹಿಸಿರುವುದರಿಂದ ಬಳಕೆಗೆ ಯೋಗ್ಯವಾಗಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.

ಆ ದೂರಿನ ಅನ್ವಯ ಆಯುಕ್ತರು ನಿವೃತ್ತ ನ್ಯಾಯಾಧೀಶರಾದ ಬಸವನಹಳ್ಳಿ ವೆಂಕಟಕೃಷ್ಣಯ್ಯ ಪ್ರಕಾಶ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು 2013ಕ್ಕಿಂತ ಹಿಂದೆ ಕರ್ತವ್ಯ ನಿರ್ವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥ್, ಮೈಮುನ್ನಿಸಾ ಬೇಗಂ, ಕರಿಗೌಡ, ಡಿ.ಸುರೇಶ್, ಟಿ.ಬಸವರಾಜು, ಎಚ್.ಟಿ.ಮಂಜುನಾಥ ಹಾಗೂ ಪ್ರಥಮ ದರ್ಜೆ ಗುಮಾಸ್ತರಾದ ವಸಂತ ಕುಮಾರ್, ಸೇವಾಕುಮಾರ್, ಅಯೂಬ್ ಖಾನ್, ವೆಂಕಟೇಶ ವಿರುದ್ಧ ತನಿಖೆ ನಡೆಯುತ್ತಿದೆ.

ಪ್ರತಿ ವರ್ಷ 8ನೇ ತರಗತಿಗೆ ದಾಖಲಾಗಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸೈಕಲ್‌ಗಳು ಸರಬರಾಜು ಆಗುತ್ತವೆ. ಶಾಲೆಗೆ ದಾಖಲಾಗಿ ಬಳಿಕ ವರ್ಗಾವಣೆ ಮಾಡಿಸಿಕೊಂಡ,  ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳಿಗೆ ವಿತರಿಸದ ಕಾರಣ ಸೈಕಲ್‌ಗಳು ಉಳಿಕೆಯಾಗುತ್ತವೆ. ಅವುಗಳನ್ನು ವಾಪಸ್‌ ಕಳುಹಿಸದೇ, ಅಥವಾ ಮೇಲಧಿಕಾರಿಗಳಿಗೆ ಮಾಹಿತಿ ನೀಡದೆ ಅಕ್ರಮವಾಗಿ ಸಂಗ್ರಹಿಸಲಾಗಿದೆ. ಅಲ್ಲದೇ, ಉಗ್ರಾಣದಲ್ಲಿ ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಅವು ಬಳಕೆಗೆ ಯೋಗ್ಯವಾಗಿಲ್ಲ. ಇದರಿಂದಾಗಿ ಸರ್ಕಾರಕ್ಕೆ ಲಕ್ಷಾಂತರ ಹಣ ನಷ್ಟ ತಪ್ಪುತಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

 ‘ಶಾಲೆ ಬಿಟ್ಟ ಮಕ್ಕಳ ಮತ್ತು ವಿದ್ಯಾರ್ಥಿನಿಲಯದಲ್ಲಿ ಇರುವ  ಮಕ್ಕಳ ಹೆಸರಿನಲ್ಲಿ ಬಂದಿದ್ದ ಸೈಕಲ್‌ಗಳನ್ನು ವಾಪಸ್‌ ಪಡೆದು ಅವುಗಳನ್ನು ಸರ್ಕಾರಕ್ಕೆ ಕಳುಹಿಸುವ ಬದಲು ಅಕ್ರಮ ಮಾರಾಟ ಮಾಡಲು ಯತ್ನಿಸಿ ವಿಫಲವಾದ ನಂತರ ಅವುಗಳನ್ನು ಉಗ್ರಾಣದಲ್ಲಿ ದಾಸ್ತಾನು ಮಾಡಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಇದು ಹಿಂದಿನ ಬಿಇಒಗಳ ವೇಳೆಯಲ್ಲಿ ದಾಖಲಾಗಿದ್ದು, ಪ್ರಕರಣ ತನಿಖಾ ಹಂತದಲ್ಲಿದೆ. ಈ ಕುರಿತು ಏನು ಹೇಳಲು ಸಾಧ್ಯವಿಲ್ಲ ಎಂದು ಬಿಇಒ ಸುಂದರ್‌ ಪತ್ರಿಕೆ ತಿಳಿಸ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !