ಕೊಂಕಣಿ ನಾಟಕೋತ್ಸವಕ್ಕೆ ಚಾಲನೆ

7
ನಾಲ್ಕು ದಿನಗಳ ಕಾಲ ನಾಲ್ಕು ರಂಗಪ್ರಯೋಗ

ಕೊಂಕಣಿ ನಾಟಕೋತ್ಸವಕ್ಕೆ ಚಾಲನೆ

Published:
Updated:
Deccan Herald

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ಕೊಂಕಣಿ ಭಾಷಾ ಮತ್ತು ಸಂಸ್ಕೃತಿ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ನಗರದ ಕೊಡಿಯಾಲಬೈಲ್‌ನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ವಿಶ್ವ ಕೊಂಕಣಿ ನಾಟಕ ಮಹೋತ್ಸವಕ್ಕೆ ಗುರುವಾರ ಚಾಲನೆ ದೊರೆಯಿತು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಸಾಹಿತಿ ಡಾ.ಗೀತಾ ಶೆಣೈ, ವಿಶ್ವ ಕೊಂಕಣಿ ಕೇಂದ್ರದ ಟ್ರಸ್ಟಿ ನಿವೇದಿತಾ ಗೋಕುಲನಾಥ ಪ್ರಭು, ಸಾಹಿತಿ ಮತ್ತು ರಂಗಕರ್ಮಿ ಡಾ.ಸಿ.ಎನ್.ಶೆಣೈ, ಕೊಂಕಣಿ ರಂಗ ನಿರ್ದೇಶಕ ಚಂದ್ರಬಾಬು ಶೆಟ್ಟಿ, ಕೇರಳ ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಪಯ್ಯನೂರು ರಮೇಶ ಪೈ ದೀಪ ಬೆಳಗಿಸುವ ಮೂಲಕ ನಾಟಕೋತ್ಸವವನ್ನು ಉದ್ಘಾಟಿಸಿದರು.

‘ಎಲ್ಲ ಕೊಂಕಣಿ ಭಾಷಿಕ ಸಮುದಾಯಗಳನ್ನೂ ಒಳಗೊಂಡು ಈ ನಾಟಕೋತ್ಸವ ನಡೆಯುತ್ತಿದೆ. ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಹಿರಿಮೆಯನ್ನು ಪರಿಚಯಿಸುವುದು ನಾಟಕೋತ್ಸವದ ಗುರಿ. ಕೊಂಕಣಿ ರಂಗಭೂಮಿಯಲ್ಲಿ ಹೊಸ ಪ್ರತಿಭೆಗಳನ್ನು ಪರಿಚಯಿಸಿ, ಪ್ರೋತ್ಸಾಹಿಸುವುದಕ್ಕೆ ಈ ನಾಟಕೋತ್ಸವ ನಾಂದಿಯಾಗಲಿದೆ ಎಂಬ ವಿಶ್ವಾಸವಿದೆ’ ಎಂದು ಬಸ್ತಿ ವಾಮನ ಶೆಣೈ ಹೇಳಿದರು.

ನಾಲ್ಕು ನಾಟಕಗಳ ಪ್ರದರ್ಶನ: ನಾಟಕೋತ್ಸವದ ಮೊದಲ ದಿನ ಕೇರಳ ಕೊಂಕಣಿ ಕಲ್ಚರಲ್‌ ಫೋರ್ಟ್ ತಂಡ ಕೊಚ್ಚಿಯ ಚಂದ್ರಬಾಬು ಶೆಟ್ಟಿ ನಿರ್ದೇಶನದ ‘ರಾವು ಮಾಮ್ಮಾಲೆ ವ್ಹೊರಣ’ ನಾಟಕ ಪ್ರದರ್ಶಿಸಿತು. ಶುಕ್ರವಾರ ಮಂಗಳೂರಿನ ರಂಗ ಅಂತರಂಗ ತಂಡ ಎಡ್ಡಿ ಸಿಕ್ವೇರಾ ನಿರ್ದೇಶನದ ‘ವರ್ಸಾಕ ಏಕ ಪಾವ್ಟಿಂ’ ನಾಟಕ ಪ್ರದರ್ಶಿಸಲಿದೆ.

ಶನಿವಾರ ಗೋವಾದ ಅಂತ್ರುಜ್‌ ಲಲಿತಕ್ ತಂಡದಿಂದ ಶ್ರೀಧರ ಕಾಮತ್ ಬಾಂಬೋಳಕರ ನಿರ್ದೇಶನದ ‘ಪ್ರೇಮ್ ಜಾಗೊರ್’ ನಾಟಕ ಪ್ರದರ್ಶನ ನೀಡಲಿದೆ. ಅಂತಿಮ ದಿನವಾದ ಭಾನುವಾರ ಮುಂಬೈನ ತ್ರಿವೇಣಿ ಕಲಾ ಸಂಗಮ ತಂಡ ಡಾ.ಸಿ.ಎನ್‌.ಶೆಣೈ ನಿರ್ದೇಶನದಲ್ಲಿ ‘ಹೂನ ಉತ್ಕಾ ಘೋಟು’ ನಾಟಕ ಪ್ರದರ್ಶಿಸಲಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !