ವಾಸನೆ ತಡೆಯಲಾಗದೇ ಮನೆ ಬದಲಿಸಿದರು!

7
ತ್ಯಾಜ್ಯ ಸಂಸ್ಕರಣಾ ಘಟದಿಂದ ಹೆಚ್ಚುತ್ತಿರುವ ಅನಾರೋಗ್ಯ

ವಾಸನೆ ತಡೆಯಲಾಗದೇ ಮನೆ ಬದಲಿಸಿದರು!

Published:
Updated:
Deccan Herald

ಬೆಂಗಳೂರು: ‘ಅಮ್ಮನ ಆರೋಗ್ಯ ದಿನೇ ದಿನೇ ಹದಗೆಡುತ್ತಿತ್ತು. ಬಹುಶಃ ತ್ಯಾಜ್ಯ ಸಂಸ್ಕರಣಾ ಘಟಕದ ಕಾರಣದಿಂದ ಅವರು ಚೇತರಿಸಿಕೊಳ್ಳುತ್ತಿಲ್ಲ ಎಂದು ವೈದ್ಯರು ಹೇಳಿದರು. ನಮಗೆ ಬೇರೆ ಆಯ್ಕೆಯೇ ಇಲ್ಲದೆ ಮನೆ ಬದಲಾಯಿಸಬೇಕಾಯಿತು’ ಎಂದು ಎಚ್‌ಎಸ್‌ಆರ್‌ ಲೇಔಟ್‌ನ ಸೋಮಸುಂದರಪಾಳ್ಯದ ನಿವಾಸಿ ಮನೋಹರ್ ಕುಮಾರ್‌ ಹೇಳಿದರು.

‘ನಾವು ಎಂಟು ವರ್ಷದಿಂದ ಇಲ್ಲಿ ವಾಸಿಸುತ್ತಿದ್ದೆವು. ಅಮ್ಮನ ಕರುಳಿನಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನೂ ಇಲ್ಲೇ ಇರಲು ಸಾಧ್ಯವಿಲ್ಲ ಎನಿಸಿತು’ ಎಂದು ಅವರು ದುಃಖ ತೋಡಿಕೊಂಡರು.

ಇಲ್ಲಿರುವ ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದ (ಕೆಸಿಡಿಸಿ) ಘಟಕವನ್ನು ಮುಚ್ಚಿಸಲು ಇಲ್ಲಿಯವರೆಗೂ ನೂರಕ್ಕೂ ಹೆಚ್ಚು ಪ್ರತಿಭಟನೆಗಳು ನಡೆದಿರಬಹುದು. ಆದರೆ ಘಟಕದಿಂದ ಅಸಹನೀಯ ವಾಸನೆ ಹೊರಹೊಮ್ಮುವುದು ಮಾತ್ರ ನಿಂತಿಲ್ಲ. ಇಷ್ಟಾದರೂ ಬಿಬಿಎಂಪಿ ಅಧಿಕಾರಿಗಳು ಮಾತ್ರ ಕಿವುಡರಂತೆ ವರ್ತಿಸುತ್ತಿದ್ದಾರೆ. ಅಲ್ಲದೇ ‘ಘಟಕವನ್ನು ಮಾತ್ರ ಯಾವುದೇ ಕಾರಣಕ್ಕೂ ಮುಚ್ಚಲು ಸಾಧ್ಯವಿಲ್ಲ’ ಎಂಬ ಹೇಳಿಕೆಗೆ ಬಿಬಿಎಂಪಿ ಬದ್ಧವಾಗಿದೆ.

ವಾಸನೆಯನ್ನು ತಡೆಗಟ್ಟಲು ಬಿಬಿಎಂಪಿ ವತಿಯಿಂದ ಜೈವಿಕ ಶೋಧಕಗಳನ್ನು ಅಳವಡಿಸಲಾಗಿದೆ. ಆದರೆ ಇದರಿಂದ ಸ್ಥಳೀಯ ನಿವಾಸಿಗಳ ಸಮಸ್ಯೆ ಕಡಿಮೆಯಾಗಿಲ್ಲ.

‘ನಾಗರೀಕ ಸಂಸ್ಥೆಗಳು ಇಲ್ಲಿ ಮನೆ ಕಟ್ಟಲು ಅವಕಾಶ ನೀಡಿವೆ. ಕೆಲವರು ಮೀಸಲು ಪ್ರದೇಶವನ್ನು (ಬಫರ್ ಜೋನ್‌) ಉಲ್ಲಂಘಿಸಿ ಮನೆ ಕಟ್ಟಿಕೊಂಡಿದ್ದಾರೆ’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಬೊಮ್ಮನಹಳ್ಳಿ ವಲಯದ ಹಸಿ ಕಸವನ್ನು ಮಾತ್ರ ಇಲ್ಲಿ ಸಂಸ್ಕರಿಸಲಾಗುತ್ತಿದೆ. ಒಣ ಕಸವನ್ನು ನಗರದ ಬೇರೆಡೆಯಿಂದಲೂ ಇಲ್ಲಿಗೆ ತರಲಾಗುತ್ತಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

ಆದರೆ ಘಟಕದಿಂದ ಹೊರಸೂಸುತ್ತಿರುವ ವಾಸನೆಗೆ ಇಲ್ಲಿಯ ಸ್ಥಳೀಯರು ಮನೆ ಬದಲಿಸುತ್ತಿದ್ದಾರೆ. ಪ್ರತಿಭಟನೆಗಳೂ ನಿಂತಿಲ್ಲ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !