ಭೂಸ್ವಾಧೀನ: ಮಾಹಿತಿ ಪ್ರದರ್ಶನ ಕಡ್ಡಾಯ

7
ಹುಟಗಿ-ಕೂಡಗಿ–ಬಾಗಲಕೋಟೆ ರೈಲು ಮಾರ್ಗ ವಿಸ್ತರಣೆ: ಜಿಲ್ಲಾಧಿಕಾರಿ ಸೂಚನೆ

ಭೂಸ್ವಾಧೀನ: ಮಾಹಿತಿ ಪ್ರದರ್ಶನ ಕಡ್ಡಾಯ

Published:
Updated:
Deccan Herald

ಬಾಗಲಕೋಟೆ: ‘ಹುಟಗಿ-ಕೂಡಗಿ–ಬಾಗಲಕೋಟೆ ರೈಲು ಮಾರ್ಗ ವಿಸ್ತರಣೆ ಹಿನ್ನೆಲೆಯಲ್ಲಿ ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಜಮೀನಿನ ವಿವರವಾದ ಮಾಹಿತಿಯನ್ನು ಕಡ್ಡಾಯವಾಗಿ ಆಯಾ ಗ್ರಾಮ ಪಂಚಾಯ್ತಿ ಕಚೇರಿಗಳಲ್ಲಿ ಪ್ರದರ್ಶಿಸುವಂತೆ’ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಸೂಚಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ನಡೆದ ಹುಟಗಿ-ಕೂಡಗಿ ಮತ್ತು ಬಾಗಲಕೋಟೆ ಮಧ್ಯದ ರೈಲು ಮಾರ್ಗ ವಿಸ್ತರಣೆಗೆ ಜಮೀನು ನೇರವಾಗಿ ಖರೀದಿಸಲು ಕರೆಯಲಾಗಿದ್ದ ಬೆಲೆ ನಿರ್ಧರಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬಾಗಲಕೋಟೆ ಮತ್ತು ಬಾದಾಮಿ ತಾಲ್ಲೂಕಿನ ಲಕಮಾಪುರ, ಕೆಲವಡಿ, ಆಡಗಲ್ ಹಾಗೂ ಬಾಗಲಕೋಟೆ ತಾಲ್ಲೂಕಿನ ಬಾಗಲಕೋಟೆ ನಗರ, ಮುಗಳೊಳ್ಳಿ, ಜಡ್ರಾಮಕುಂಟಿ ಸೇರಿ ಒಟ್ಟು ಆರು ಗ್ರಾಮಗಳಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ’ ಎಂದರು.

‘ಸ್ವಾಧೀನಪಡಿಸಿಕೊಳ್ಳುವ ಜಮೀನಿನ ವಿಚಾರದಲ್ಲಿ ಏನಾದರೂ ಆಕ್ಷೇಪಣೆ, ಸಲಹೆ, ಸೂಚನೆ ಇದ್ದಲ್ಲಿ ಅಕ್ಟೋಬರ್ 10ರ ಒಳಗಾಗಿ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ತಿಳಿಸಿದ ಅವರು, ಅಕ್ಟೋಬರ್ 10 ರ ನಂತರ ಬಂದ ಆಕ್ಷೇಪಣೆಗಳನ್ನು ಸ್ವೀಕರಿಸುವುದಿಲ್ಲ. ಬಂದ ಅರ್ಜಿಗಳನ್ನು ಪರಿಶೀಲಿಸಿ ಅಭಿಪ್ರಾಯದೊಂದಿಗೆ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ’ ಎಂದರು.

‘ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ನಿಗದಿಪಡಿಸಿರುವ ದರ ಪಟ್ಟಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸಭೆಗೆ ತಿಳಿಸಿದರು. ಅದಕ್ಕೆ ರೈತರು ಆಕ್ಷೇಪಿಸಿ ಈ ದರ ಬಹಳ ಕಡಿಮೆಯಾಗಿದೆ’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ದುಡಗಂಟಿ, ಬೆಲೆ ನಿಗದಿಯ ಬಗ್ಗೆ ನಿಮ್ಮ ಆಕ್ಷೇಪವನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !