ನಿವೃತ್ತ ಡಿವೈಎಸ್ಪಿ ಪುತ್ರನಿಂದ ಹಲ್ಲೆ

7

ನಿವೃತ್ತ ಡಿವೈಎಸ್ಪಿ ಪುತ್ರನಿಂದ ಹಲ್ಲೆ

Published:
Updated:

ಬೆಂಗಳೂರು: ರೇಸ್‌ಕೋರ್ಸ್ ರಸ್ತೆಯ ‘ರಿನೈಸಾನ್ಸ್’ ಹೋಟೆಲ್‌ನಲ್ಲಿ ಖಾಸಗಿ ಕಂಪನಿ ಉದ್ಯೋಗಿ ಎನ್‌.ಯುವರಾಜ್ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ದಾಂದಲೆ ನಡೆಸಿದ್ದ ಗ್ಯಾಂಗ್‌ನಲ್ಲಿ ನಿವೃತ್ತ ಡಿವೈಎಸ್ಪಿಯೊಬ್ಬರ ಪುತ್ರನೂ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಮ್ಮಗೊಂಡನಹಳ್ಳಿ ನಿವಾಸಿಯಾದ ಯುವರಾಜ್, ಸೆ.8ರ ರಾತ್ರಿ ಸ್ನೇಹಿತರ ಜತೆ ಊಟಕ್ಕೆ ಹೋಟೆಲ್‌ಗೆ ತೆರಳಿದ್ದರು. ಅಲ್ಲಿ ಸುಮನ್, ಅಶೋಕ್ ಹರಿಕೃಷ್ಣ, ವಿಕ್ರಂ ಎಂಬುವರು ಯುವರಾಜ್ ಹಾಗೂ ಸ್ನೇಹಿತರ ಜತೆ ಜಗಳ ಪ್ರಾರಂಭಿಸಿ ಹಲ್ಲೆ ನಡೆಸಿದ್ದರು. ಈ ಸಂಬಂಧ ಯುವರಾಜ್ ಸ್ನೇಹಿತ ಕಾರ್ತಿಕ್ ಹೈಗ್ರೌಂಡ್ಸ್ ಠಾಣೆಗೆ ದೂರು ಕೊಟ್ಟಿದ್ದರು.

ಆರೋಪಿಗಳು ಪರಾರಿಯಾಗಿದ್ದ ಕಾರಿನ ನೋಂದಣಿ ಸಂಖ್ಯೆ (ನೋಂದಣಿ ಸಂಖ್ಯೆ 999) ಆಧರಿಸಿ ಪೊಲೀಸರು ತನಿಖೆ ಪ್ರಾರಂಭಿಸಿದಾಗ, ಸುಮನ್ ನಿವೃತ್ತ ಡಿವೈಎಸ್ಪಿಯೊಬ್ಬರ ಪುತ್ರ ಎಂದು ಗೊತ್ತಾಗಿದೆ. ಎಫ್‌ಐಆರ್ ದಾಖಲಾದ ನಂತರ ಆರೋಪಿಗಳು ಮನೆ ಬಿಟ್ಟು ಹೋಗಿದ್ದು, ಪೊಲೀಸರು ಸುಮನ್‌ನ ಕಾರನ್ನು ಜಪ್ತಿ ಮಾಡಿದ್ದಾರೆ.

‘ಊಟ ಮಾಡಿ ಕೈ ತೊಳೆಯಲು ಹೋಗುತ್ತಿದ್ದಾಗ ಯುವರಾಜ್‌ನ ಕೈ ಒಬ್ಬಾತನ ಕೈಗೆ ತಾಕಿತು. ಅಷ್ಟಕ್ಕೇ ಆತ ಅವಾಚ್ಯ ಶಬ್ದಗಳಿಂದ ಬೈಯ್ಯಲಾರಂಭಿಸಿದ. ನಾವು ಕ್ಷಮೆ ಕೇಳುತ್ತಿರುವಾಗಲೇ ಆತನ ಸ್ನೇಹಿತನೊಬ್ಬ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ’ ಎಂದು ಕಾರ್ತಿಕ್ ದೂರು ಕೊಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 2

  Sad
 • 0

  Frustrated
 • 3

  Angry

Comments:

0 comments

Write the first review for this !