ನ. 3, 4ರಂದು ಮಂಗಳೂರು ಸಾಹಿತ್ಯೋತ್ಸವ

7
ಎಸ್‌.ಎಲ್‌.ಭೈರಪ್ಪ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ

ನ. 3, 4ರಂದು ಮಂಗಳೂರು ಸಾಹಿತ್ಯೋತ್ಸವ

Published:
Updated:

ಮಂಗಳೂರು: ‘ಭಾರತದ ಕಲ್ಪನೆ’ ಎಂಬ ಘೋಷವಾಕ್ಯದಡಿ ನವೆಂಬರ್ 3 ಮತ್ತು 4ರಂದು ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ‘ಮಂಗಳೂರು ಸಾಹಿತ್ಯೋತ್ಸವ–2018’ ನಡೆಯಲಿದೆ. ಹಿರಿಯ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಅವರಿಗೆ ಈ ಸಮ್ಮೇಳನದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

‘ಪ್ರಾಚೀನ ಭಾರತದ ವಿದ್ವತ್ತು ಶಾಂತಿ, ಭ್ರಾತೃತ್ವ ಮತ್ತು ಜಗತ್ತಿನ ಎಲ್ಲರ ಒಳಿತನ್ನು ಬಯಸುವುದಕ್ಕೆ ‍ಪೂರಕವಾಗಿತ್ತು. ‘ಉದಾರ ಚರಿತಾನಾಂ ತು ವಸುಧೈವ ಕುಟುಂಬಕಂ’ ಎಂಬ ತತ್ವದಲ್ಲಿ ದೇಶ ನಂಬಿಕೆ ಹೊಂದಿದೆ. ಈ ಕುರಿತು ದೇಶದ ಪ್ರಸಿದ್ಧ ಚಿಂತಕರು ಎರಡು ದಿನಗಳ ಸಾಹಿತ್ಯೋತ್ಸವದಲ್ಲಿ ಚಿಂತನ ಮಂಥನ ನಡೆಸಲಿದ್ದಾರೆ. ವಿಚಾರ ಮಂಡನೆ, ಚರ್ಚೆ, ಸಂವಾದ, ಪುಸ್ತಕ ವಿಮರ್ಶೆ, ಕಾರ್ಯಾಗಾರ, ಪುಸ್ತಕ ಮತ್ತು ಚಿತ್ರಕಲಾ ಪ್ರದರ್ಶನಗಳು ಈ ಉತ್ಸವದ ಭಾಗವಾಗಿರುತ್ತವೆ’ ಎಂದು ಮಂಗಳೂರು ಸಾಹಿತ್ಯೋತ್ಸವದ ಸಂಘಟನಾ ಸಮಿತಿಯ ಪ್ರಕಟಣೆ ತಿಳಿಸಿದೆ.

ಸಾಹಿತಿಗಳಾದ ರಾಜೀವ್‌ ಮಲ್ಹೋತ್ರಾ, ಡಾ.ಡೇವಿಡ್ ಫ್ರಾಲೆ, ಮೇಜರ್ ಗೌರವ್ ಆರ್ಯ, ಆರ್‌.ಜಗನ್ನಾಥನ್‌, ಮಧುಕಿಶ್ವರ್, ಸಹನಾ ವಿಜಯಕುಮಾರ್, ಶೆಫಾಲಿ ವೈದ್ಯ, ಪ್ರಕಾಶ್ ಬೆಳವಾಡಿ, ವಿವೇಕ್ ಅಗ್ನಿಹೋತ್ರಿ, ಸಂದೀಪ್‌ ಬಾಲಕೃಷ್ಣ, ಆನಂದ್ ರಂಗನಾಥನ್‌, ಚಕ್ರವರ್ತಿ ಸೂಲಿಬೆಲೆ, ರೋಹಿತ್ ಚಕ್ರತೀರ್ಥ, ಶಡ್ಡಾಲು ರಾನಡೆ, ಮಕರಂದ್ ಪರಾಂಜಪೆ ಮತ್ತು ಅನಿರ್ಬನ್‌ ಗಂಗೂಲಿ ಭಾಗವಹಿಸಲಿದ್ದಾರೆ ಎಂದು ಸಮಿತಿ ಮಾಹಿತಿ ನೀಡಿದೆ.

ನಿಟ್ಟೆ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ಎನ್‌.ವಿನಯ್‌ ಹೆಗ್ಡೆ, ಹಿರಿಯ ಪತ್ರಕರ್ತೆ ಸಂಧ್ಯಾ ಪೈ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್‌ ಸಾಹಿತ್ಯೋತ್ಸವದ ಪೋಷಕರಾಗಿದ್ದಾರೆ. ಬಿಜೆಪಿ ಮುಖಂಡರಾದ ಗಣೇಶ್ ಕಾರ್ಣಿಕ್‌, ಬೃಜೇಶ್ ಚೌಟ, ವಿಕಾಸ್‌ ಪುತ್ತೂರು, ಆರ್‌ಎಸ್‌ಎಸ್‌ ಮುಖಂಡ ಪ್ರದೀಪ್‌ ಮೈಸೂರು, ಬೆಂಗಳೂರಿನ ನಾಗರಾಜ ರೆಡ್ಡಿ ಮತ್ತು ಮಂಗಳೂರಿನ ಸುನೀಲ್ ಕುಲಕರ್ಣಿ ಸಂಘಟನಾ ಸಮಿತಿಯಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !