ಸಮರ ಕಲೆಗಳು ಜೀವನದ ಭಾಗ: ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌

7
ಮುಯ್‌ಥಾಯ್‌ ಚಾಂ‍ಪಿಯನ್‌ಷಿಪ್‌ ಉದ್ಘಾಟನೆಯಲ್ಲಿ ಜಿಲ್ಲಾಧಿಕಾರಿ

ಸಮರ ಕಲೆಗಳು ಜೀವನದ ಭಾಗ: ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌

Published:
Updated:
Deccan Herald

ಮಂಗಳೂರು: ‘ಸಮರ ಕಲೆಗಳು ನಮ್ಮ ಜೀವನದ ಭಾಗ. ಅವುಗಳನ್ನು ಜತನದಿಂದ ಕಾಯ್ದುಕೊಂಡು, ರಕ್ಷಿಸಬೇಕಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಮುಯ್‌ಥಾಯ್‌ ಅಸೋಷಿಯೇಷನ್‌ ವತಿಯಿಂದ ನಗರದ ಆಫೀಸರ್ಸ್‌ ಕ್ಲಬ್‌ನಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಮುಯ್‌ಥಾಯ್‌ ಚಾಂಪಿಯನ್‌ಷಿಪ್‌ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲ ಕಾಲಘಟ್ಟದಲ್ಲೂ ಸಮರ ಕಲೆಗಳಿಗೆ ಪ್ರಾಮುಖ್ಯ ಇತ್ತು. ಈಗಲೂ ಅದು ಉಳಿದಿದೆ. ಮುಯ್‌ಥಾಯ್‌ ಕ್ರೀಡಾಪಟುಗಳನ್ನು ಬೆಳೆಸುವುದರಲ್ಲಿ ಮಂಗಳೂರು ಮುಂಚೂಣಿಯಲ್ಲಿರುವುದು ಸಂತಸದ ಸಂಗತಿ’ ಎಂದರು.

ಮುಯ್‌ಥಾಯ್‌ ರಾಷ್ಟ್ರೀಯ ತರಬೇತುದಾರ ಬಾಲಕೃಷ್ಣ ಶೆಟ್ಟಿ ಮಾತನಾಡಿ, ‘ತುಳುನಾಡು ವೀರರ ಪರಂಪರೆಗೆ ಹೆಸರಾದುದು. ಇಲ್ಲಿ ಸಮರ ಕಲೆಗಳಿಗೆ ಹೆಚ್ಚಿನ ಬೆಂಬಲವಿದೆ. ಕೇವಲ ಮೂರು ವರ್ಷಗಳ ಅವಧಿಯಲ್ಲಿ ಮುಯ್‌ಥಾಯ್‌ ಕ್ರೀಡಾ ತಂಡ ಇಲ್ಲಿ ಬೃಹತ್ತಾಗಿ ಬೆಳೆದಿರುವುದು ಇದಕ್ಕೆ ಸಾಕ್ಷಿ’ ಎಂದು ಹೇಳಿದರು.

ಮುಯ್‌ಥಾಯ್‌ ದೈಹಿಕ ಸಾಮರ್ಥ್ಯ ಕಾಯ್ದುಕೊಳ್ಳುವುದು ಮತ್ತು ಆತ್ಮರಕ್ಷಣೆಗೆ ಉತ್ತಮವಾದ ಕ್ರೀಡೆ. ಸಮರ ಕಲೆಗಳಲ್ಲಿ ಮುಯ್‌ಥಾಯ್‌ಗೆ ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.

ರಾಜ್ಯ ಮುಯ್‌ಥಾಯ್‌ ಅಸೋಸಿಯೇಷನ್‌ ಗೌರವಾಧ್ಯಕ್ಷ ಎ.ಸದಾನಂದ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜೆಪಿ ಮುಖಂಡ ಗಣೇಶ್ ಕಾರ್ಣಿಕ್‌, ಮಂಗಳೂರು ಮಹಾನಗರ ಪಾಲಿಕೆ ಜಂಟಿ ಆಯುಕ್ತ ಗೋಕುಲದಾಸ್ ನಾಯಕ್‌, ಮಾಂಡ್‌ ಶೋಭನ್ನ್ ಅಧ್ಯಕ್ಷ ಲೂಯಿಸ್‌ ಪಿಂಟೊ, ಭಾರತೀಯ ಮುಯ್‌ಥಾಯ್‌ ಅಸೋಸಿಯೇಷನ್‌ ಮಹಾಪ್ರಧಾನ ಕಾರ್ಯದರ್ಶಿ ದಯಾಚಂದ್‌ ಬೋಲ, ರಾಜ್ಯ ಮುಯ್‌ಥಾಯ್‌ ಅಸೋಸಿಯೇಷನ್‌ ಅಧ್ಯಕ್ಷ ರಾಜಗೋಪಾಲ್‌ ರೈ, ಕಾನೂನು ಸಲಹೆಗಾರ ರಾಘವೇಂದ್ರ ರಾವ್‌, ಜಿಲ್ಲಾ ಮುಯ್‌ಥಾಯ್‌ ಅಸೋಸಿಯೇಷನ್‌ ಹಿರಿಯ ಸಲಹೆಗಾರ ವಿ.ಕರುಣಾಕರನ್‌, ಗೌರವಾಧ್ಯಕ್ಷ ಅಣ್ಣಯ್ಯ ಕುಲಾಲ್‌, ಅಧ್ಯಕ್ಷ ವಿಕ್ರಮ್‌ ದತ್‌, ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !