ಮಾಯಾವತಿ ಪ್ರಧಾನಿ ಮಾಡಲು ಪ್ರತಿಪಕ್ಷಗಳು ಒಂದಾಗಿವೆ: ಓಂ ಪ್ರಕಾಶ್‌ ಚೌತಾಲ

7

ಮಾಯಾವತಿ ಪ್ರಧಾನಿ ಮಾಡಲು ಪ್ರತಿಪಕ್ಷಗಳು ಒಂದಾಗಿವೆ: ಓಂ ಪ್ರಕಾಶ್‌ ಚೌತಾಲ

Published:
Updated:

ಗೋಹಾನ: ‘ಬಿಎಸ್‌ಪಿ ನಾಯಕಿ ಮಾಯಾವತಿ ಅವರನ್ನು ಮುಂದಿನ ಪ್ರಧಾನಿಯನ್ನಾಗಿ ಮಾಡಲು ಎಲ್ಲ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಲು ಪಕ್ಷವು ಶ್ರಮಿಸಲಿದೆ’ ಎಂದು ಇಂಡಿಯನ್‌ ನ್ಯಾಷನಲ್‌ ಲೋಕ ದಳ (ಐಎನ್‌ಎಲ್‌ಡಿ) ಪಕ್ಷದ ಅಧ್ಯಕ್ಷ ಓಂ ಪ್ರಕಾಶ್‌ ಚೌತಾಲ ಹೇಳಿದ್ದಾರೆ.

ಎರಡು ವಾರಗಳ ಅವಧಿಗಾಗಿ ಪೆರೋಲ್‌ ಮೇಲೆ ಹೊರ ಬಂದಿರುವ ಅವರು, ತಂದೆ ದೇವಿ ಲಾಲ್‌ ಅವರ 105ನೇ ಜನ್ಮದಿನಾಚರಣೆ ಅಂಗವಾಗಿ ಇಲ್ಲಿ ಭಾನುವಾರ ಆಯೋಜಿಸಿದ್ದ ರ‍್ಯಾಲಿಯಲ್ಲಿ ಮಾತನಾಡಿದರು.

‘ಹರಿಯಾಣದಲ್ಲಿ ಮುಂದಿನ ಬಾರಿ ಐಎನ್‌ಎಲ್‌ಡಿ–ಬಿಎಸ್‌ಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರೈತರ ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವವರ ಸಾಲವನ್ನು ಮನ್ನಾ ಮಾಡಲಾಗುವುದು’ ಎಂದೂ ಭರವಸೆ ನೀಡಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !