ಮೂರು ಗಂಟೆ ಚಿಕಿತ್ಸೆ; 580 ಗ್ರಾಂ ಹರಳು ಹೊರಕ್ಕೆ

7

ಮೂರು ಗಂಟೆ ಚಿಕಿತ್ಸೆ; 580 ಗ್ರಾಂ ಹರಳು ಹೊರಕ್ಕೆ

Published:
Updated:
Prajavani

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮೂತ್ರ ಜನಕಾಂಗ ಶಸ್ತ್ರ ಚಿಕಿತ್ಸಾ ವಿಭಾಗದಿಂದ ಸತತ ಮೂರು ಗಂಟೆ ಚಿಕಿತ್ಸೆ ಮಾಡಿ 580 ಗ್ರಾಂ ತೂಕದ ಹರಳನ್ನು (ಬ್ಲಾಡರ್ ಸ್ಟೋನ್) ಹೊರ ತೆಗೆಯಲಾಗಿದೆ ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೂರು ತಿಂಗಳಿಂದ ಮೂತ್ರ ವಿಸರ್ಜನೆ ತೊಂದರೆಯಿಂದ ಬಳಲುತ್ತಿದ್ದ ಸಿಂದಗಿ ತಾಲ್ಲೂಕಿನ 40 ವರ್ಷದ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆಯಲ್ಲಿ ಮೂತ್ರ ಚೀಲದಲ್ಲಿ ಹರಳು ಇರುವುದು ಖಚಿತಗೊಂಡ ನಂತರ ಸತತ ಮೂರು ಗಂಟೆ ಶ್ರಮವಹಿಸಿ, ಮಹಿಳೆಯ ಮೂತ್ರ ಚೀಲದಲ್ಲಿ ಇರುವ ಅತ್ಯಂತ ದೊಡ್ಡದಾದ ಹರಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ.

ಮೂತ್ರ ಜನಕಾಂಗ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ವಿನಯ ಎಸ್.ಕುಂದರಗಿ ನೇತೃತ್ವದಲ್ಲಿ ಡಾ.ಸಂತೋಷ ಪಾಟೀಲ, ಅರವಳಿಕೆ ತಜ್ಞ ಡಾ.ವಿಜಯ ಕಟ್ಟಿ, ಡಾ.ಶ್ರೀದೇವಿ ಮೂಲಿಮನಿ ಹಾಗೂ ಸಿಬ್ಬಂದಿ ಸತತ ಮೂರು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ, 580 ಗ್ರಾಂ ಹರಳನ್ನು ಹೊರತೆಗೆಯಲು ಯಶಸ್ವಿಯಾಗಿದ್ದಾರೆ.

ಇದು ಅತಿ ವಿರಳ ಪ್ರಕರಣವಾಗಿದ್ದು, ಆಯುಷ್ಮಾನ್ ಭಾರತ -ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. ಸದ್ಯ ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕಲ್ಯಾಣಪ್ಪಗೋಳ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !