ಕೆಆರ್‌ಎಸ್‌: ವಾಹನ ಸಂಚಾರ ನಿರ್ಬಂಧ

6

ಕೆಆರ್‌ಎಸ್‌: ವಾಹನ ಸಂಚಾರ ನಿರ್ಬಂಧ

Published:
Updated:

ಮಂಡ್ಯ: ಮೈಸೂರು ದಸರಾ ಅಂಗವಾಗಿ ರಾಜ್ಯ, ಹೊರರಾಜ್ಯಗಳಿಂದ ಪ್ರವಾಸಿಗರ ವಾಹನ ಬರುತ್ತಿದ್ದು ಸುಗಮ ಸಂಚಾರಕ್ಕಾಗಿ ಸಂಚಾರದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.

ಅ.10 ರಿಂದ ಅ.21ರವರಗೆ ಮಧ್ಯಾಹ್ನ 3 ರಿಂದ ರಾತ್ರಿ 11 ಗಂಟೆವರಗೆ ಪಾಂಡವಪುರ ತಾಲ್ಲೂಕು ಕಟ್ಟೇರಿ ಕಡೆಯಿಂದ ಕೆ.ಆರ್.ಎಸ್‌ ಮಾರ್ಗವಾಗಿ ಬರುವ ಎಲ್ಲಾ ಸರಕು ಸಾಗಣೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಈ ಮಾರ್ಗವಾಗಿ ಚಲಿಸುವ ವಾಹನಗಳು ಎಲೆಕೆರೆ ಹ್ಯಾಂಡ್ ಪೋಸ್ಟ್ ಮಾರ್ಗವಾಗಿ ಕೆ.ಆರ್.ಪೇಟೆ- ಮೈಸೂರು ರಸ್ತೆಯಲ್ಲಿ ಚಲಿಸಿ ಮೈಸೂರು ಅಥವಾ ಬೆಂಗಳೂರು ಕಡೆಗೆ ಏಕಮುಖವಾಗಿ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ.

ಅ.17 ರಿಂದ ಅ.21 ರವರೆಗೆ ಮಧ್ಯಾಹ್ನ 3 ರಿಂದ ರಾತ್ರಿ 11 ಗಂಟೆವರಗೆ ಮೈಸೂರಿನಿಂದ ಬೃಂದಾವನ ಗಾರ್ಡನ್ ವೀಕ್ಷಣೆ ಮಾಡಿಬರುವ ಪ್ರವಾಸಿಗರ ವಾಹನಗಳು ವಾಪಸ್ ಹೊರಡುವಾಗ ಅಣೆಕಟ್ಟೆ ಬಳಿಯ ಹೊಸ ಸೇತುವೆಯಿಂದ ಉತ್ತರಕ್ಕೆ ತಿರುಗಿ ಕಟ್ಟೇರಿ, ಎಲೆಕೆರೆ ಹ್ಯಾಂಡ್‌ಪೋಸ್ಟ್‌, ಮಾರ್ಗವಾಗಿ ಕೆ.ಆರ್.ಪೇಟೆ- ಮೈಸೂರು ರಸ್ತೆಯಲ್ಲಿ ಚಲಿಸಿ ಮೈಸೂರು, ಮಂಡ್ಯ, ಬೆಂಗಳೂರು ಕಡೆಗೆ ಏಕಮುಖವಾಗಿ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಆದೇಶ ನೀಡಿದ್ಧಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !