ಮತ್ತೆ ರಸ್ತೆ ಬಂದ್: ದ್ವೀಪವಾದ ಅನಗವಾಡಿ!, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

7
ಮುಳ್ಳು ಹಚ್ಚಿ ಸುಪರ್ದಿಗೆ ತೆಗೆದುಕೊಂಡರು

ಮತ್ತೆ ರಸ್ತೆ ಬಂದ್: ದ್ವೀಪವಾದ ಅನಗವಾಡಿ!, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

Published:
Updated:
Deccan Herald

ಅನಗವಾಡಿ (ಬಾಗಲಕೋಟೆ): ತಿಂಗಳ ಒಳಗಾಗಿ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದ ಅಧಿಕಾರಿಗಳು ಈಗ ಮಾತು ತಪ್ಪಿದ್ದಾರೆ. ಹಾಗಾಗಿ ಇಲ್ಲಿನ ಊಣದ ಕುಟುಂಬದವರು ಬುಧವಾರ ಗ್ರಾಮದ ಮುಖ್ಯ ರಸ್ತೆಯನ್ನು ಮತ್ತೆ ಬಂದ್ ಮಾಡಿ, ಸುಪರ್ದಿಗೆ ತೆಗೆದುಕೊಂಡಿದ್ದಾರೆ.

ಇದರಿಂದ ಹೋಬಳಿ ಕೇಂದ್ರ ಎನಿಸಿದ ಅನಗವಾಡಿ ಎರಡು ದಿನಗಳಿಂದ ಅಕ್ಷರಶಃ ದ್ವೀಪವಾಗಿ ಬದಲಾಗಿದೆ. ಮುಖ್ಯ ರಸ್ತೆ ಬಂದ್ ಆಗಿರುವುದರಿಂದ ಶಾಲೆ, ನಾಡಕಚೇರಿ, ಹಾಲಿನ ಡೇರಿ, ಪಶು ಆಸ್ಪತ್ರೆ ಸೇರಿದಂತೆ ಎಲ್ಲ ಸಂಪರ್ಕಗಳೂ ಬಂದ್ ಆಗಿವೆ. ಗ್ರಾಮಸ್ಥರು ಬಳಸು ಹಾದಿಯಲ್ಲಿ ಸಾಗಬೇಕಿದೆ.

ಎರಡು ತಿಂಗಳ ಹಿಂದೆಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಗ್ರಾಮಕ್ಕೆ ತೆರಳಿದ್ದ ಬೀಳಗಿ ತಹಶೀಲ್ದಾರ್ ಉದಯ ಕುಂಬಾರ, ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಊಣದ ಕುಟುಂಬದವರ ಮನವೊಲಿಸಿ ರಸ್ತೆಗೆ ಹಾಕಿದ್ದ ಮುಳ್ಳುಕಂಟಿ ತೆರವುಗೊಳಿಸಿದ್ದರು.

ಏನಿದು ತೊಂದರೆ?:

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ 1999ರಲ್ಲಿ ಊಣದ ಕುಟುಂಬಕ್ಕೆ ಸೇರಿದ ಮೂರು ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಸಂತ್ರಸ್ತರಿಗೆ 2 ಎಕರೆ 25 ಗುಂಟೆಗೆ ಮಾತ್ರ ಪರಿಹಾರ ನೀಡಲಾಗಿದೆ. ಉಳಿದ ಜಾಗದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಆ ಜಾಗದಲ್ಲಿ ಪುನರ್ವಸತಿ ಕೇಂದ್ರ ಹಾಗೂ ರಸ್ತೆ ನಿರ್ಮಿಸಲಾಗಿದೆ. ಉಳಿದ ಜಾಗಕ್ಕೆ ಪರಿಹಾರ ಕೇಳಿದರೆ ಅಧಿಕಾರಿಗಳು ಸ್ಪಂದಿಸಿಲ್ಲ ಎನ್ನಲಾಗಿದೆ.

ಇದರಿಂದ ಬೇಸತ್ತ ಸಂತ್ರಸ್ತರು, ಬೀಳಗಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಅಲ್ಲಿ, ವಾದ–ವಿವಾದದ ನಂತರ 15 ಗುಂಟೆಗೆ ಪರಿಹಾರ ನೀಡದೇ ಇರುವುದು ವೇದ್ಯವಾಗಿದೆ. ಅದರಲ್ಲಿ ಎರಡು ಗುಂಟೆ ಖರಾಬು ಬರುವುದರಿಂದ ಉಳಿದ 13 ಗುಂಟೆ ಊಣದ ಕುಟುಂಬದ ಮಾಲೀಕ್ವತದಲ್ಲಿಯೇ ಇರುವುದು ಖಚಿತಗೊಂಡಿದೆ. ಆ ಜಾಗದ ಮಾಲೀಕತ್ವವನ್ನು ಕುಟುಂಬದವರಿಗೇ ದೃಢೀಕರಿಸಿ 2015ರಲ್ಲಿ ನ್ಯಾಯಾಲಯ ಆದೇಶ ನೀಡಿದೆ.

ಅದರಂತೆ, ಆ ಜಾಗವನ್ನು ತಮ್ಮ ಸ್ವಾಧೀನಕ್ಕೆ ನೀಡುವಂತೆ ಆಗಿನ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಉಪಯೋಗವಾಗಿಲ್ಲ. ಮತ್ತೆ ನ್ಯಾಯಾಲಯದ ಮೊರೆ ಹೋದಾಗ ಅವರ ಕಚೇರಿ ಜಪ್ತಿ ಮಾಡುವಂತೆ ಆದೇಶಿಸಲಾಗಿದೆ. ಬಿಸಿ ತಟ್ಟುತ್ತಿದ್ದಂತೆಯೇ ಗ್ರಾಮಕ್ಕೆ ಬಂದ ಅಧಿಕಾರಿಗಳು, ನಕ್ಷೆ ಹಿಡಿದು ಜಾಗ ಗುರುತಿಸಿದ್ದಾರೆ. ಆಗ ಗ್ರಾಮದ ಮುಖ್ಯ ರಸ್ತೆಯೇ ಊಣದ ಕುಟುಂಬದ ಸುಪರ್ದಿಗೆ ಬಂದಿದೆ. ಅದರಂತೆ 159 ಮೀಟರ್ ಉದ್ದ ಹಾಗೂ 9 ಮೀಟರ್ ಅಗಲದ ರಸ್ತೆ ಬಿಟ್ಟುಕೊಡಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !