ಗ್ರಾಮೀಣ ದಸರಾ ಸಂಭ್ರಮ: 120ಕೆ.ಜಿ. ಗುಂಡು ಎತ್ತಿದ ನಾಗೇಶ್‌

7

ಗ್ರಾಮೀಣ ದಸರಾ ಸಂಭ್ರಮ: 120ಕೆ.ಜಿ. ಗುಂಡು ಎತ್ತಿದ ನಾಗೇಶ್‌

Published:
Updated:
Deccan Herald

ಹುಣಸೂರು: ನಗರದ ಮುನೇಶ್ವರ ಕಾವಲ್‌ ಮೈದಾನದಲ್ಲಿ ಸಂಭ್ರಮ ಮನೆಮಾಡಿತ್ತು. ಅಲ್ಲಿ ರೈತರು ವಿವಿಧ ಆಟೋಟಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಕೃಷಿ ಇಲಾಖೆ ಮತ್ತು ತಾಲ್ಲೂಕು ಆಡಳಿದ ನೇತೃತ್ವದಲ್ಲಿ  ನಡೆದ ಕ್ರೀಡಾಕೂಟದಲ್ಲಿ ಯುವಜನರ ದಂಡೇ ಭಾಗವಹಿಸಿತ್ತು. ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಗಮನಾರ್ಹ.

ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಮೂರು ಕಾಲಿನ ಓಟ, ಕೊಡದಲ್ಲಿ ನೀರು ಹೊತ್ತು ಓಡುವುದು, ಲೆಮೆನ್ ಇನ್ ಸ್ಪೂನ್ ಓಟ ಸೇರಿದಂತೆ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿವಿಧ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿ ಗ್ರಾಮೀಣ ಕ್ರೀಡೆಗಳಿಗೆ ವಿಶೇಷ ರಂಗು ನೀಡಿದರು.

ಕ್ರೀಡಾಕೂದಲ್ಲಿ ಹೆಚ್ಚು ಗಮನ ಸೆಳೆದ ಗುಂಡು ಎತ್ತುವ ಸ್ಪರ್ಧೆಯಲ್ಲಿ ಹುಣಸೂರು ನಗರದ ಕಲ್ಕುಣಿಕೆ ಬಡಾವಣೆಯ ನಾಗೇಶ್‌ 53 ಸೆಕೆಂಡಿನಲ್ಲಿ 120 ಕೆ.ಜಿ. ತೂಕದ ಗುಂಡನ್ನು 10 ಬಾರಿ ಎತ್ತುವ ಮೂಲಕ ಪ್ರಥಮ ಸ್ಥಾನಪಡೆದರು. ಚಂದ್ರಶೇಖರ್‌ 1.18 ನಿಮಿಷದಲ್ಲಿ 7 ಬಾರಿ ಎತ್ತಿ ದ್ವಿತಿಯ ಸ್ಥಾನ ಪಡೆದರು. ಮೋಹನ್‌ ರಾಜ್‌ 6 ಬಾರಿ ಎತ್ತಿ ತೃತಿಯ ಸ್ಥಾನಪಡೆದರು.

ಕ್ರೀಡಾಕೂಟದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಕ್ರಮವಾಗಿ ಮೊದಲ ಮೂರ ಸ್ಥಾನ ಪಡೆದವರ ವಿವರ ಇಂತಿದೆ

ಸ್ಪರ್ಧೆ ಮತ್ತು ಫಲಿತಾಂಶ: ಪುರುಷರ ವಿಭಾಗ:

ನಿಧಾನ ಸೈಕಲ್‌ ರೇಸ್‌: ಪೃಥ್ವಿ , ಕಾರ್ತಿಕ್‌ ಗೌಡ, ಸಚಿನ್‌ಕುಮಾರ್‌ (ತೃತಿಯ)

ಗೊಬ್ಬರದ ಮೂಟೆ ಹೊತ್ತು ಓಟ: ಗುರುಮೂರ್ತಿ, ಪೃಥ್ವಿ, ನಂಜುಂಡ.

ಮೂರುಕಾಲಿನ ಓಟ: ಗುರುಮೂರ್ತಿ ಮತ್ತು ಕಾರ್ತಿಕ್‌, ಅವಿನಾಶ್ ಮತ್ತು ಗೋಪಾಲ್‌, ಕಾರ್ತಿಕ್‌ಗೌಡ ಮತ್ತು ಅಜಿತ್‌ಕುಮಾರ್ 

ಗೋಣಿಚೀಲ ಓಟ: ಅಭಿಲಾಷ್‌ , ನವೀನ್‌, ಪ್ರೇಮ್‌.

ಮಹಿಳಾ ವಿಭಾಗ:

ನೀರಿನ ಬಿಂದಿಗೆ ಹೊತ್ತು ಓಟ : ವರೋನಿಕಾ, ಭೂಮಿಕಾ, ಪಿ.ಅರ್ಪಿತಾ. ಲೆಮನ್‌ ಇನ್‌ ಸ್ಪೂನ್ ಓಟ: ಭೂಮಿಕಾ,  ಕವಿತಾ,  ಕೃಷ್ಣವೇಣಿ. ಮೂರು ಕಾಲಿನ ಓಟ: ಕಾವ್ಯಾ ಮತ್ತು ಧನು, ಅರ್ಪಿತಾ ಮತ್ತು ಭೂಮಿಕಾ, ವೆರೋನಿಕಾ ಮತ್ತು ವೀಣಾ.

ಕಪ್ಪೆ ಓಟ: ವೆರೋನಿಕಾ, ಸುಮಾ, ಭೂಮಿಕಾ. ರಂಗೋಲಿ : ಸೌಮ್ಯಾ, ಸಿಂಧೂ, ಪವಿತ್ರಾ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !