ಶೀಘ್ರದಲ್ಲೇ ಬಯಲು ಶೌಚ ಮುಕ್ತ ಕರ್ನಾಟಕ: ಪರಮೇಶ್ವರ್

7

ಶೀಘ್ರದಲ್ಲೇ ಬಯಲು ಶೌಚ ಮುಕ್ತ ಕರ್ನಾಟಕ: ಪರಮೇಶ್ವರ್

Published:
Updated:

ವಿಜಯಪುರ: ‘ಬೇಸ್‌ಲೈನ್ ಸರ್ವೇಯಂತೆ ಕರ್ನಾಟಕ ಶೀಘ್ರದಲ್ಲೇ ಬಯಲು ಶೌಚ ಮುಕ್ತ ರಾಜ್ಯವಾಗಲಿದೆ’ ಎಂದು ಕೇಂದ್ರದ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಪರಮೇಶ್ವರ್ ತಿಳಿಸಿದರು.

‘ವಿಜಯಪುರ, ಬೀದರ್‌, ರಾಯಚೂರು, ಬೆಳಗಾವಿ ಜಿಲ್ಲೆಗಳಲ್ಲಿ ಇದೂವರೆಗೂ ಶೇ 100ರ ಗುರಿ ಸಾಧಿಸಲಾಗಿಲ್ಲ. ಅಕ್ಟೋಬರ್‌ ಅಂತ್ಯದೊಳಗೆ ಈ ಜಿಲ್ಲೆಗಳಲ್ಲೂ ಗುರಿ ಪೂರ್ಣಗೊಳಿಸಿ, ಬಯಲು ಶೌಚ ಮುಕ್ತ ರಾಜ್ಯ ಎಂದು ಘೋಷಿಸಲಾಗುವುದು’ ಎಂದು ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಬೇಸ್‌ಲೈನ್‌ ಸರ್ವೇ ಪ್ರಕಾರ ಶೌಚಾಲಯ ನಿರ್ಮಿಸಿದ ಬಳಿಕವೂ, ಕರ್ನಾಟಕದಲ್ಲಿ 4.5 ಲಕ್ಷ ಮನೆಗಳಿಗೆ ಶೌಚಾಲಯವಿಲ್ಲ ಎಂಬುದು ಈಗಾಗಲೇ ವರದಿ ಮೂಲಕ ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಈ ಮನೆಗಳಿಗೂ ಶೌಚಾಲಯ ನಿರ್ಮಿಸಲಾಗುವುದು. ಜತೆಗೆ ಜನರಲ್ಲೂ ಜಾಗೃತಿ ಮೂಡಿಸಲು ಅಭಿಯಾನ ಹಮ್ಮಿಕೊಳ್ಳಲಾಗುವುದು’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸ್ವಚ್ಛ ಭಾರತ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದರಿಂದ, ಅನಾರೋಗ್ಯಕ್ಕೀಡಾಗುವವರ ಸಂಖ್ಯೆ ಕೊಂಚ ಪ್ರಮಾಣದಲ್ಲಿ ಕ್ಷೀಣಿಸಿದೆ. ಇಂದಿಗೂ ವಿಜಯಪುರ ಜಿಲ್ಲೆಯ 52 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ’ ಎಂದು ಪರಮೇಶ್ವರ್ ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !