ಶೀಲ ಶಂಕಿಸಿ ಪತ್ನಿ ಕೊಲೆ ಪ್ರಕರಣ: ಪತಿಗೆ ಜೀವಾವಧಿ ಶಿಕ್ಷೆ, ₹25 ಸಾವಿರ ದಂಡ

7

ಶೀಲ ಶಂಕಿಸಿ ಪತ್ನಿ ಕೊಲೆ ಪ್ರಕರಣ: ಪತಿಗೆ ಜೀವಾವಧಿ ಶಿಕ್ಷೆ, ₹25 ಸಾವಿರ ದಂಡ

Published:
Updated:

ಬಾಗಲಕೋಟೆ: ಪತ್ನಿಯ ಶೀಲ ಶಂಕಿಸಿ ಆಕೆ ಮಲಗಿದ್ದಾಗ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪತಿರಾಯನಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿದೆ.

ತಾಲ್ಲೂಕಿನ ನೀರಲಕೇರಿಯ ಕೃಷ್ಣ ಗಲಗಲಿ ಶಿಕ್ಷೆಗೊಳಗಾದವ. ಪತ್ನಿ ನೀಲವ್ವನ ಕೊಲೆ ಮಾಡಿದ ಆರೋಪದ ಮೇಲೆ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದರು.

ಘಟನೆಯ ವಿವರ: ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಕೃಷ್ಣ ಗಲಗಲಿ ನಿತ್ಯ ಜಗಳವಾಡುತ್ತಿದ್ದನು. 2014ರ ಫೆಬ್ರುವರಿ 20ರಂದು ಕುಡಿದುಬಂದು ನೀಲವ್ವ ಜೊತೆ ಜಗಳವಾಡಿದ್ದನು. ಅಂದು ಜಗಳ ವಿಕೋಪಕ್ಕೆ ಹೋಗಿ ಪತ್ನಿ ಮಲಗಿದ್ದ ವೇಳೆ ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದನು. ತೀವ್ರ ಗಾಯಗೊಂಡಿದ್ದ ನೀಲವ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಎರಡು ದಿನಗಳ ನಂತರ ಆಕೆ ಮೃತಪಟ್ಟಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಅನಿಲ್ ಕಟ್ಟಿ ಗುರುವಾರ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಅಭಿಯೋಜಕ ವಿ.ಜಿ.ಮಾಮನಿ ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !