ಸಾಹೊದಲ್ಲಿ ‘4ಜಿ ಗರ್ಲ್’

7

ಸಾಹೊದಲ್ಲಿ ‘4ಜಿ ಗರ್ಲ್’

Published:
Updated:
Deccan Herald

‘ಸಾಷಾ ಚೆಟ್ರಿ’ ಎಂದರೆ, ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡು ಯಾರಿಕೆ ಅಂತ ಯೋಚಿಸುತ್ತಾರೆ. ಅದೇ, ‘4 ಜಿ ಗರ್ಲ್’ ಎನ್ನಲಿ. ಓಹ್ ಅವರಾ ಗೊತ್ತು ಬಿಡು ಎಂದು ಥಟ್ಟನೆ ಹೇಳುತ್ತಾರೆ ಯಾರಾದರು.

ಇಷ್ಟು ದಿನ ಏರ್‌ಟೆಲ್‌ನ 4 ಜಿ ಅಭಿಯಾನದ ಜಾಹೀರಾತಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಈ ‘4 ಜಿ ಗರ್ಲ್’ ಈಗ ಸಿನಿಮಾವೊಂದಕ್ಕೆ ಬಣ್ಣ ಹಚ್ಚಲು ಸಿದ್ದರಾಗಿದ್ದಾರೆ. ಹೌದು, ತೆಲುಗು ನಟ ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಸಾಹೊ’ದಲ್ಲಿ ಅವರು ನಟಿಸಲಿದ್ದಾರಂತೆ.

ಏರ್‌ಟೆಲ್ ಸಂಸ್ಥೆಯು 2015ರಲ್ಲಿ 4ಜಿ ಕ್ಯಾಂಪೇನ್ ಆರಂಭಿಸಿತ್ತು. ಕ್ಯಾಂಪೇನ್‌ ಅಂಗವಾಗಿ ಸಂಸ್ಥೆ ತಯಾರಿಸಿದ್ದ ಹತ್ತಾರು ಜಾಹೀರಾತುಗಳಲ್ಲಿ ಸಾಷಾ ನಟಿಸಿದ್ದರು. ‘4 ಜಿ ಗರ್ಲ್‌’ನಿಂದಾಗಿಯೇ ಆ ಜಾಹೀರಾತುಗಳು ಎಲ್ಲೆಡೆ ಸಾಕಷ್ಟು ಹಿಟ್ ಆಗಿದ್ದವು. ಅವರು ಸಹ ರಾತ್ರೋರಾತ್ರಿ ಸೆನ್ಸೆಷನಲ್ ಸ್ಟಾರ್ ಸಹ ಆಗಿ ಲಕ್ಷಾಂತರ ಮಂದಿಯ ಹೃದಯ ಕದ್ದಿದ್ದರು. ಇದೇ ಮೊದಲ ಬಾರಿಗೆ ಸಿನಿಮಾವೊಂದರಲ್ಲಿ ನಟಿಸಲು ಅವರು ಮುಂದಾಗಿದ್ದಾರೆ.

ಸ್ಟಾರ್ ಡೈರೆಕ್ಟರ್ ಎಂದೇ ಖ್ಯಾತರಾದ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಾಹುಬಲಿ–2 ಚಿತ್ರದ ಬಳಿಕ ಇದೇ ಮೊದಲ ಬಾರಿಗೆ ಬೇರೊಂದು ಚಿತ್ರದಲ್ಲಿ ಪ್ರಭಾಸ್ ಅಭಿನಯಿಸುತ್ತಿದ್ದಾರೆ. ಹೀಗಾಗಿ, ಆ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ. ಅದೇ ಚಿತ್ರದಲ್ಲಿ ಸಾಷಾ ಸಹ ಅಭಿನಯಿಸುತ್ತಿರುವುದರಿಂದ ಅಭಿಮಾನಿಗಳು ಮತ್ತಷ್ಟು ಸಂತಸಗೊಂಡಿದ್ದಾರೆ. ಆದರೆ, ಸಾಷಾ ಯಾವ ರೀತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರು ತೆರೆ ಮೇಲೆ ಹೇಗೆ ಕಾಣುತ್ತಾರೆ ಎಂಬ ಮಾಹಿತಿಗಳು ಬಹಿರಂಗಗೊಂಡಿಲ್ಲ.

ಸಾಹೊ ಚಿತ್ರದಲ್ಲಿ ಈಗಾಗಲೇ ಬಾಲಿವುಡ್‌ನ ಖ್ಯಾತ ನಟರು ನಟಿಸುತ್ತಿದ್ದಾರೆ. ಜಾಕಿ ಶ್ರಾಫ್, ನೈಲ್ ನಿತಿನ್ ಮುಖೇಶ್ ಹಾಗೂ ಮಂದಿರಾ ಬೇಡಿ ನಟಿಸುತ್ತಿದ್ದು, ಮಿ.ಪರ್ಫೆಕ್ಟ್‌ ಜೊತೆ ನಾಯಕಿಯಾಗಿ ಬಾಲಿವುಡ್‌ನ ಸುಂದರಿ ಶ್ರದ್ಧಾ ಕಪೂರ್ ಸಹ ರೋಮ್ಯಾನ್ಸ್ ಮಾಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !