ಅಪಘಾತ: ವಿದ್ಯಾರ್ಥಿಗಳ ಸಾವು

7

ಅಪಘಾತ: ವಿದ್ಯಾರ್ಥಿಗಳ ಸಾವು

Published:
Updated:

ಕೋಲಾರ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಸರ್ವಿಸ್‌ ರಸ್ತೆಯಲ್ಲಿ ಎಪಿಎಂಸಿ ಬಳಿ ಶುಕ್ರವಾರ ಸಂಜೆ ಕಾರು ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಗರದ ಕೀಲುಕೋಟೆ ಬಡಾವಣೆಯ ಶಶಾಂಕ್‌ (21) ಮತ್ತು ಜಾಯ್‌ ಇಸ್ರೇಲ್‌ (19) ಮೃತಪಟ್ಟವರು. ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿಯಾಗಿದ್ದ ಶಶಾಂಕ್‌ ಮತ್ತು ಪಿಯುಸಿ ಓದುತ್ತಿದ್ದ ಜಾಯ್‌ ಇಸ್ರೇಲ್‌ ಸ್ನೇಹಿತರು ಎಂದು ಪೊಲೀಸರು ತಿಳಿಸಿದ್ದಾರೆ.

ತರಗತಿ ಮುಗಿದ ನಂತರ ಇವರಿಬ್ಬರೂ ಬೈಕ್‌ನಲ್ಲಿ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೋಗಿ ನಗರಕ್ಕೆ ವಾಪಸ್‌ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಬೈಕ್‌ ಚಾಲನೆ ಮಾಡುತ್ತಿದ್ದ ಜಾಯ್‌, ಕಾರನ್ನು ಹಿಂದಿಕ್ಕಿ ಏಕಾಏಕಿ ರಸ್ತೆಯ ಮಧ್ಯ ಭಾಗಕ್ಕೆ ವಾಹನ ನುಗ್ಗಿಸಿದ್ದಾರೆ. ಆಗ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದ ಜಾಯ್‌ ಮತ್ತು ಶಶಾಂಕ್‌ ಮೇಲೆ ಕಾರು ಹರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನಾ ಸಂದರ್ಭದಲ್ಲಿ ಇಬ್ಬರೂ ಹೆಲ್ಮೆಟ್‌ ಧರಿಸಿರಲಿಲ್ಲ. ನಗರ ಸಂಚಾರ ಠಾಣೆ ಪೊಲೀಸರು ಕಾರು ಚಾಲಕನನ್ನು ಬಂಧಿಸಿ ವಾಹನ ವಶಕ್ಕೆ ತೆಗೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !