ರಾಜ್ಯಮಟ್ಟದ ರೋಡ್‌ ಸೈಕ್ಲಿಂಗ್‌: ಪ್ರತಾಪ ಪಡಚಿ, ಅಂಕಿತಾ ಚಿನ್ನದ ಸಾಧನೆ

7
ಮೊದಲ ದಿನ ವಿಜಯಪುರ ಸೈಕ್ಲಿಸ್ಟ್‌ಗಳ ಪ್ರಾಬಲ್ಯ

ರಾಜ್ಯಮಟ್ಟದ ರೋಡ್‌ ಸೈಕ್ಲಿಂಗ್‌: ಪ್ರತಾಪ ಪಡಚಿ, ಅಂಕಿತಾ ಚಿನ್ನದ ಸಾಧನೆ

Published:
Updated:
Deccan Herald

ಹುಬ್ಬಳ್ಳಿ: ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸಿದ ಸ್ಪರ್ಧೆಯಲ್ಲಿ ವೇಗವಾಗಿ ಪೆಡಲ್‌ ತುಳಿದ ವಿಜಯಪುರ ಕ್ರೀಡಾನಿಲಯದ ಪ್ರತಾಪ ಪಡಚಿ ಮತ್ತು ಅಂಕಿತಾ ರಾಠೋಡ ಅವರು ರಾಜ್ಯಮಟ್ಟದ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಚಿನ್ನದ ನಗು ಬೀರಿದರು.

ಬಿಡ್ನಾಳ–ಗಬ್ಬೂರು ರಿಂಗ್‌ರೋಡ್‌ನಲ್ಲಿ ನಡೆದ ವೈಯಕ್ತಿಕ ಟೈಮ್‌ ಟ್ರಯಲ್‌ ಸ್ಪರ್ಧೆಯಲ್ಲಿ ಅವರು ಈ ಸಾಧನೆ ಮಾಡಿದರು. ವಾಣಿಜ್ಯನಗರಿಯಲ್ಲಿ ಮೊದಲ ಬಾರಿಗೆ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ಆಯೋಜನೆಯಾಗಿದೆ. ಒಟ್ಟು 150 ಸೈಕ್ಲಿಸ್ಟ್‌ಗಳು ಪಾಲ್ಗೊಂಡಿದ್ದಾರೆ. ಇಲ್ಲಿ ಮೊದಲ ಮೂರು ಸ್ಥಾನ ಪಡೆದ ಸ್ಪರ್ಧಿಗಳು ಮುಂದಿನ ತಿಂಗಳು ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ಆಡಲು ಅರ್ಹತೆ ಪಡೆದುಕೊಳ್ಳಲಿದ್ದಾರೆ.

ಮೊದಲ ದಿನದ ಫಲಿತಾಂಶ:

ಟೈಮ್‌ ಟ್ರಯಲ್ಸ್: (ಬಾಲಕರ ವಿಭಾಗ): 14 ವರ್ಷದ ಒಳಗಿನವರು; (7 ಕಿ.ಮೀ.): ಪ್ರತಾಪ ಪಡಚಿ (ಕಾಲ: 9:20.29ಸೆ.)–1, ಮಲ್ಲಿಕಾರ್ಜುನ ಯಾದವಾಡ (9:31.47ಸೆ.)–2, ಸಂಪತ್‌ ಪಾಸಮೇಲ (ಮೂವರೂ ವಿಜಯಪುರ ಕ್ರೀಡಾ ನಿಲಯ; 9:40.68ಸೆ.)–3.

16 ವರ್ಷದ ಒಳಗಿನವರು; (10 ಕಿ.ಮೀ): ಅಭಿಷೇಕ ಮರನೂರ (ವಿಜಯಪುರ ಕ್ರೀಡಾ ನಿಲಯ; 13:10.94ಸೆ.)–1, ಲಾಯಪ್ಪ ಮುಧೋಳ (ಚಂದರಗಿ ಕ್ರೀಡಾಶಾಲೆ; 13:26.85ಸೆ.)–2, ನಾಗರಾಜ ಸೋಮಗೊಂಡ (ವಿಜಯಪುರ ಕ್ರೀಡಾ ನಿಲಯ; 13:41.52ಸೆ.)–3.

18 ವರ್ಷದ ಒಳಗಿನವರು; ವಿಶ್ವನಾಥ ಗಡಾದ (ವಿಜಯಪುರ ಕ್ರೀಡಾ ನಿಲಯ; 27:36.92ಸೆ.)–1, ಅಭಿಷೇಕ ಮರನೂರ (ವಿಜಯಪುರ ಕ್ರೀಡಾ ನಿಲಯ; 27:56.73ಸೆ.)–2, ಕೆ.ವಿ. ವೈಶಾಖ (ಮೈಸೂರು ಜಿಲ್ಲೆ; 28:17.10ಸೆ.)–3.

23 ವರ್ಷದೊಳಗಿನವರ ವಿಭಾಗ (30 ಕಿ.ಮೀ.): ನಾಗಪ್ಪ ಮರಡಿ (ಚಂದರಗಿ ಕ್ರೀಡಾಶಾಲೆ; 42:53.27ಸೆ.)–1, ಶಿವಲಿಂಗ ಯಳಮಲಿ (ವಿಜಯಪುರ ಜಿಲ್ಲೆ; 44:05.66ಸೆ.)–2, ಪ್ರಶಾಂತ ದೇವಕ್ಕಿ (ವಿಜಯಪುರ ಕ್ರೀಡಾನಿಲಯ; 44:49.35ಸೆ.)–3.

ಪುರುಷರ ವಿಭಾಗ: 30 ಕಿ.ಮೀ: ನವೀನ ಶ್ರೀನಿವಾಸ (ಬೆಂಗಳೂರು ಜಿಲ್ಲೆ; 42:56.95ಸೆ.)–1, ಯಲಗುರೇಶ ಗಡ್ಡಿ (ವಿಜಯಪುರ ಜಿಲ್ಲೆ; 43:17.41ಸೆ.)–2, ಶಿವಲಿಂಗಪ್ಪ ಯಳಮಲಿ (ವಿಜಯಪುರ ಜಿಲ್ಲೆ; 46:59.18ಸೆ.)–3.

ಮಾಸ್ಡ್‌ ಸ್ಟಾರ್ಟ್‌: 16 ವರ್ಷದ ಒಳಗಿನವರು (20 ಕಿ.ಮೀ): ಅನಿಲ ಕಾಡಪ್ಪಗೋಳ (ವಿಜಯಪುರ ಕ್ರೀಡಾ ನಿಲಯ; 32:57.80ಸೆ.)–1, ಮಧು ಕಾಡಾಪುರ (ಬಾಗಲಕೋಟೆ ಜಿಲ್ಲೆ; 33:00.00ಸೆ.)–2, ಆನಂದ ಮಣ್ಣೂರ (ವಿಜಯಪುರ ಕ್ರೀಡಾನಿಲಯ; 33:02.18ಸೆ.)–3.

ಬಾಲಕಿಯರ ವಿಭಾಗ (ವೈಯಕ್ತಿಕ ಟೈಮ್‌ ಟ್ರಯಲ್‌): 14 ವರ್ಷದ ಒಳಗಿನವರು (5 ಕಿ.ಮೀ.): ಅಂಕಿತಾ ರಾಠೋಡ (7:40.02ಸೆ.)–1, ಅಕ್ಷತಾ ಭೂತನಾಳ (7:44.57ಸೆ.)–2, ಪಾಯಲ್‌ ಚವ್ಹಾಣ (ಮೂವರೂ ವಿಜಯಪುರ ಕ್ರೀಡಾ ನಿಲಯ; 7:53.15ಸೆ.)–3.

16 ವರ್ಷದ ಒಳಗಿನವರು (10 ಕಿ.ಮೀ): ಅಂಕಿತಾ ರಾಠೋಠ, (16:30.70ಸೆ.)–1, ಪಾಯಲ್‌ ಚವ್ಹಾಣ (16:38.90ಸೆ.)–2, ಅಕ್ಷತಾ ಭೂತನಾಳ (ಮೂವರೂ ವಿಜಯಪುರ ಕ್ರೀಡಾ ನಿಲಯ; 16:48.35ಸೆ.)–3.

18 ವರ್ಷದ ಒಳಗಿನವರು (15 ಕಿ.ಮೀ): ಸಾವಿತ್ರಿ ಹೆಬ್ಬಾಳಟ್ಟಿ (24:48.90ಸೆ.)–1, ಸೌಮ್ಯಾ ಅಂತಾಪುರ (25:02.70ಸೆ.)–2, ಕಾವೇರಿ ಮುರನಾಳ (ಮೂವರೂ ವಿಜಯಪುರ ಕ್ರೀಡಾ ನಿಲಯ; 25:12.32ಸೆ.)–3.

ಮಹಿಳಾ ವಿಭಾಗ: 20 ಕಿ.ಮೀ: ಸಾವಿತ್ರಿ ಹೆಬ್ಬಾಳಟ್ಟಿ (ವಿಜಯಪುರ ಕ್ರೀಡಾನಿಲಯ; 33:39.96ಸೆ.)–1, ಕಾವೇರಿ ಮುರನಾಳ (ವಿಜಯಪುರ ಕ್ರೀಡಾನಿಲಯ; 34:01.73ಸೆ.)–2, ರೇಣುಕಾ ದಂಡಿನ (ಗದಗ ಜಿಲ್ಲೆ; 35:44.50ಸೆ.)–3.

16 ವರ್ಷದ ಒಳಗಿನವರ ಮಾಸ್ಡ್‌ ಸ್ಟಾರ್ಟ್‌ (15 ಕಿ.ಮೀ): ಸವಿತಾ ಅಡಗಲ್‌ (ಬಾಗಲಕೋಟೆ ಕ್ರೀಡಾ ನಿಲಯ; 25:48.02ಸೆ.)–1, ಅಕ್ಷತಾ ಬೋತನಾಳ (ವಿಜಯಪುರ ಕ್ರೀಡಾ ನಿಲಯ; 25:50.00ಸೆ.)–2, ಭಾವನಾ ಪಾಟೀಲ (25:52.18ಸೆ.)–3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !