ದಸರಾ ಕ್ರೀಡಾಕೂಟದ ವಾಲಿಬಾಲ್‌ ಟೂರ್ನಿ: ದಕ್ಷಿಣ ಕನ್ನಡ, ಮೈಸೂರು ಚಾಂಪಿಯನ್‌

7

ದಸರಾ ಕ್ರೀಡಾಕೂಟದ ವಾಲಿಬಾಲ್‌ ಟೂರ್ನಿ: ದಕ್ಷಿಣ ಕನ್ನಡ, ಮೈಸೂರು ಚಾಂಪಿಯನ್‌

Published:
Updated:
Deccan Herald

ಮೈಸೂರು: ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮೈಸೂರು ತಂಡಗಳು ದಸರಾ ಕ್ರೀಡಾಕೂಟದ ವಾಲಿಬಾಲ್‌ ಟೂರ್ನಿಯ‌ಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಚಾಂಪಿಯನ್‌ ಆದವು.

ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ದಕ್ಷಿಣ ಕನ್ನಡ ತಂಡ 25–20, 25–17, 25–16 ರಲ್ಲಿ ಬೆಂಗಳೂರು ನಗರ ತಂಡವನ್ನು ಮಣಿಸಿತು.

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಧಾರವಾಡ ತಂಡ 25–21, 22–25, 25–27, 25–19, 15–8 ರಲ್ಲಿ ಬಳ್ಳಾರಿ ತಂಡವನ್ನು ಸೋಲಿಸಿತು.

ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್‌ ಪಂದ್ಯಗಳಲ್ಲಿ ಬೆಂಗಳೂರು 25-10, 25-22, 25-22 ರಲ್ಲಿ ಬಳ್ಳಾರಿ ವಿರುದ್ಧ, ದಕ್ಷಿಣ ಕನ್ನಡ 25–21, 25–27, 25–16, 25–23 ರಲ್ಲಿ ಧಾರವಾಡ ವಿರುದ್ಧ ಜಯಿಸಿತು.

ಮೈಸೂರಿಗೆ ಪ್ರಶಸ್ತಿ: ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಅತಿಥೇಯ ಮೈಸೂರು ತಂಡ 25–16, 25–23, 28–30, 25–22 ರಲ್ಲಿ ದಕ್ಷಿಣ ಕನ್ನಡ ತಂಡವನ್ನು ಸೋಲಿಸಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬೆಂಗಳೂರು ನಗರ 25–20, 25–21, 23–25, 25–21 ರಲ್ಲಿ ಧಾರವಾಡ ವಿರುದ್ಧ ಜಯ ಸಾಧಿಸಿತು.

ಸೆಮಿಫೈನಲ್‌ ಪಂದ್ಯಗಳಲ್ಲಿ ದಕ್ಷಿಣ ಕನ್ನಡ ತಂಡ 25-12, 25-16, 25-22 ರಲ್ಲಿ ಧಾರವಾಡ ವಿರುದ್ಧ; ಮೈಸೂರು ತಂಡ 25-23, 25-23, 22-25,25-20 ರಲ್ಲಿ ಬೆಂಗಳೂರು ವಿರುದ್ಧ ಜಯ ಸಾಧಿಸಿತ್ತು.

ಫೈನಲ್‌ಗೆ ಮೈಸೂರು, ಬೆಳಗಾವಿ: ಆತಿಥೇಯ ಮೈಸೂರು ಮತ್ತು ಬೆಳಗಾವಿ ತಂಡಗಳು ಕೊಕ್ಕೊ ಟೂರ್ನಿಯ ಪುರುಷರ ವಿಭಾಗದ ಫೈನಲ್‌ ಪ್ರವೇಶಿಸಿವೆ.

ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ ಪಂದ್ಯಗಳಲ್ಲಿ ಮೈಸೂರು 9–3 ರಲ್ಲಿ ಹಾವೇರಿ ವಿರುದ್ಧ; ಬಾಗಲಕೋಟೆ 11–10 ರಲ್ಲಿ ಬೆಳಗಾವಿ ವಿರುದ್ಧ ಗೆದ್ದಿತು.

ಮಹಿಳೆಯರ ವಿಭಾಗದಲ್ಲಿ ಬೆಳಗಾವಿ ಮತ್ತು ಧಾರವಾಡ ತಂಡಗಳು ಪ್ರಶಸ್ತಿಗೆ ಪೈಪೋಟಿ ನಡೆಸಲಿವೆ. ಸೆಮಿಫೈನಲ್‌ ಪಂದ್ಯಗಳಲ್ಲಿ ಬೆಳಗಾವಿ 8–3 ರಲ್ಲಿ ಬೆಂಗಳೂರು ವಿರುದ್ಧ; ಧಾರವಾಡ ತಂಡ 10–8 ರಲ್ಲಿ ಬಾಗಲಕೋಟೆ ವಿರುದ್ಧ ಗೆಲುವು ಪಡೆಯಿತು. ಫೈನಲ್‌ ಪಂದ್ಯ ಶನಿವಾರ ನಡೆಯಲಿದೆ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !