ಕೆಐಎ: ಮೂರು ತಿಂಗಳಿನಲ್ಲಿ 81 ಲಕ್ಷ ಮಂದಿ ಪ್ರಯಾಣ

7
ವಿಮಾನ ನಿಲ್ದಾಣದ 2ನೇ ತ್ರೈಮಾಸಿಕ ವರದಿ ಬಿಡುಗಡೆ

ಕೆಐಎ: ಮೂರು ತಿಂಗಳಿನಲ್ಲಿ 81 ಲಕ್ಷ ಮಂದಿ ಪ್ರಯಾಣ

Published:
Updated:
Deccan Herald

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ, 2018–19ನೇ ಸಾಲಿನ ಎರಡನೇ ತ್ರೈಮಾಸಿಕ (ಜುಲೈನಿಂದ ಸೆಪ್ಟೆಂಬರ್) ವರದಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.

‘ಜಗತ್ತಿನಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ವಿಮಾನ ನಿಲ್ದಾಣಗಳ ಪೈಕಿ ನಮ್ಮ ನಿಲ್ದಾಣ 2ನೇ ಸ್ಥಾನದಲ್ಲಿದೆ. ಮುಂಬರುವ ವರ್ಷದಲ್ಲಿ ಮೊದಲ ಸ್ಥಾನ ಪಡೆಯುವ ಗುರಿ ಇದೆ. ಅದಕ್ಕೆ ಅಗತ್ಯವಾದ ತಂತ್ರಜ್ಞಾನವನ್ನು ನಿಲ್ದಾಣದಲ್ಲಿ ಅಳವಡಿಸಲಾಗುತ್ತಿದೆ. ಅದರ ಜೊತೆಗೆ, ಮೂಲ ಸೌಕರ್ಯ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ’ ಎಂದು ನಿಲ್ದಾಣದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಹರಿ ಮಾರರ್ ತಿಳಿಸಿದರು. 

2ನೇ ತ್ರೈಮಾಸಿಕ ವರದಿಯ ಮುಖ್ಯಾಂಶಗಳು:

ಪ್ರಯಾಣಿಕರ ಸಂಖ್ಯೆ 81 ಲಕ್ಷ

ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಹೆಚ್ಚಳವಾದ ಪ್ರಮಾಣ ಶೇ 28.1ರಷ್ಟು  

ದೇಶಿ ಪ್ರಯಾಣಿಕರ ಸಂಖ್ಯೆ 70 ಲಕ್ಷ

ವಿದೇಶಿ ಪ್ರಯಾಣಿಕರ ಸಂಖ್ಯೆ 10 ಲಕ್ಷ

ವಿಮಾನಗಳ ಸಂಖ್ಯೆ 59,184

ನಿತ್ಯವೂ ಹಾರಾಟ ನಡೆಸುವ ವಿಮಾನಗಳು 643

ಆಗಸ್ಟ್ 31ರಂದು ಹಾರಾಟ ನಡೆಸಿದ ವಿಮಾನಗಳು  692

1,04,093 ಮೆಟ್ರಿಕ್ ಟನ್ ಕಾರ್ಗೊ ಸಾಗಣೆ

ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದಾಗ ಶೇ 16.4ರಷ್ಟು ಹೆಚ್ಚಾದ ಪ್ರಮಾಣ

12 ಕಾರ್ಗೊ ಸಾಗಿಸುವ ವಿಮಾನಗಳು (2–ಸ್ಥಳೀಯ, 10–ಅಂತರರಾಷ್ಟ್ರೀಯ) 

ನಿಲ್ದಾಣದಿಂದ ಕಾರ್ಯಾಚರಣೆ ನಡೆಸುತ್ತಿರುವ ವೈಮಾನಿಕ ಸಂಸ್ಥೆಗಳ ಸಂಖ್ಯೆ 34

ಸಂಪರ್ಕ ಹೊಂದಿರುವ ನಿಲ್ದಾಣಗಳ ಸಂಖ್ಯೆ 69

ಪ್ರಯಾಣಿಕರು ಹೆಚ್ಚು ಸಂಚರಿಸಿದ ನಗರಗಳು

ಸ್ಥಳೀಯ

ದೆಹಲಿ – 11.21 ಲಕ್ಷ

ಮುಂಬೈ – 9.06 ಲಕ್ಷ

ಹೈದರಾಬಾದ್ – 4.55 ಲಕ್ಷ

ಅಂತರರಾಷ್ಟ್ರೀಯ

ದುಬೈ – 1.99 ಲಕ್ಷ

ಸಿಂಗಪುರ – 1.52 ಲಕ್ಷ

ಕೊಲಂಬೊ – 74 ಸಾವಿರ

 

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !