ನಗರದಲ್ಲಿ ಗಿರಿಯಾಸ್‌ ಮಳಿಗೆ ಆರಂಭ

7

ನಗರದಲ್ಲಿ ಗಿರಿಯಾಸ್‌ ಮಳಿಗೆ ಆರಂಭ

Published:
Updated:
Deccan Herald

ಕೋಲಾರ: ನಗರದ ಎಂ.ಬಿ.ರಸ್ತೆಯಲ್ಲಿ ವಾಟರ್ ಟ್ಯಾಂಕ್‌ ಮುಂಭಾಗದಲ್ಲಿ ಗಿರಿಯಾಸ್‌ ಎಲೆಕ್ಟ್ರಾನಿಕ್ಸ್‌ ಉತ್ಪನ್ನ ಮಾರಾಟ ಮಳಿಗೆಯು ಶನಿವಾರ ಕಾರ್ಯಾರಂಭ ಮಾಡಿತು.

ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಗಿರಿಯಾಸ್‌ನ 61 ಮಳಿಗೆಗಳಿವೆ. ರಾಜ್ಯದಲ್ಲಿ 37 ಮಳಿಗೆಗಳಿದ್ದು, ಈ ಪೈಕಿ ಬೆಂಗಳೂರು ನಗರವೊಂದರಲ್ಲೇ 27 ಮಳಿಗೆಗಳಿವೆ. ರಾಜ್ಯ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಎಂ.ಎ.ಸಲೀಂ ನಗರದಲ್ಲಿನ 62ನೇ ಮಳಿಗೆಗೆ ಚಾಲನೆ ನೀಡಿದರು.

ಮಳಿಗೆ ಆರಂಭ ಸಂಬಂಧ ಪತ್ರಿಕೆಗಳಲ್ಲಿ ನೀಡಿದ್ದ ಜಾಹೀರಾತು ಪ್ರತಿ ಹಾಗೂ ಪ್ರಚಾರದ ಕರಪತ್ರದೊಂದಿಗೆ ಮಳಿಗೆಗೆ ಬಂದ ಮೊದಲ 200 ಗ್ರಾಹಕರಿಗೆ ಉಡುಗೊರೆ ನೀಡಲಾಯಿತು. ಉಡುಗೊರೆಗಾಗಿ ಗ್ರಾಹಕರು ಮಳಿಗೆ ಬಳಿ ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು.

ಮಳಿಗೆ ಆರಂಭದ ಮೊದಲ ದಿನವಾದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಪ್ರತಿ ಉತ್ಪನ್ನ ಖರೀದಿ ಮೇಲೆ ವಿಶೇಷ ರಿಯಾಯಿತಿ ನೀಡಲಾಯಿತು. ಹೀಗಾಗಿ ಗ್ರಾಹಕರು ಖರೀದಿಗೆ ಮುಗಿಬಿದ್ದರು. ಮಳಿಗೆಯು ಗ್ರಾಹಕರಿಂದ ತುಂಬಿ ಹೋಗಿತ್ತು. ಗ್ರಾಹಕರಿಗೆ ಸಿಹಿ ವಿತರಿಸಲಾಯಿತು.

‘ವರ್ಷದ 365 ದಿನವೂ ಮಳಿಗೆ ತೆರೆದಿರುತ್ತದೆ. ಪ್ರತಿನಿತ್ಯ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8.30ರವರೆಗೆ ವಹಿವಾಟು ನಡೆಯುತ್ತದೆ. ವರ್ಷವಿಡೀ ಉತ್ಪನ್ನಗಳ ಖರೀದಿಗೆ ರಿಯಾಯಿತಿ ನೀಡಲಾಗುತ್ತದೆ’ ಎಂದು ಗಿರಿಯಾಸ್‌ ಇನ್ವೆಸ್ಟ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಹಿರಿಯ ವ್ಯವಸ್ಥಾಪಕ ಕ್ಲ್ಯಾತಸ್‌ ಬಿ.ಮಥಾಯ್ಸ್‌ ಸುದ್ದಿಗಾರರಿಗೆ ತಿಳಿಸಿದರು.

ಗಿರಿಯಾಸ್‌ ಇನ್ವೆಸ್ಟ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಹನ್ಸ್‌ರಾಜ್‌, ನಿರ್ದೇಶಕ ರಿಷಬ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !