ಕ್ಲಿಯರ್ ಟ್ರಿಪ್: ಹಣ ವಾಪಸ್‌ ಕೊಡುಗೆ

7

ಕ್ಲಿಯರ್ ಟ್ರಿಪ್: ಹಣ ವಾಪಸ್‌ ಕೊಡುಗೆ

Published:
Updated:

ಬೆಂಗಳೂರು‌: ಪ್ರವಾಸೋದ್ಯಮದ ಆನ್‌ಲೈನ್‌ ಸಂಸ್ಥೆ ಕ್ಲಿಯರ್ ಟ್ರಿಪ್, ನವರಾತ್ರಿ ಪ್ರಯುಕ್ತ ಗ್ರಾಹಕರಿಗಾಗಿ ವಿಮಾನ ಹಾಗೂ ಹೋಟೆಲ್ ಬುಕ್ಕಿಂಗ್ ಟಿಕೆಟ್ ದರದ ಮೇಲೆ  ಆಕರ್ಷಕ ‘ಕ್ಯಾಷ್‌ ಬ್ಯಾಕ್’ ಕೊಡುಗೆ ಘೋಷಿಸಿದೆ.

ವಿದೇಶ ವಿಮಾನ ಪ್ರಯಾಣದ ಟಿಕೆಟ್ ದರದ ಮೇಲೆ ₹ 20 ಸಾವಿರ ಹಾಗೂ ದೇಶಿಯ ವಿಮಾನ ಪ್ರಯಾಣದ ಟಿಕೆಟ್ ದರದ ಮೇಲೆ ₹ 1 ಸಾವಿರವರೆಗೆ ಹಣ ವಾಪಸ್‌ ನೀಡಲಿದೆ. ಹೋಟೆಲ್ ಬುಕ್ಕಿಂಗ್ ಮೇಲೆ ಶೇ 30 ರಷ್ಟು ಕ್ಯಾಷ್‌ ಬ್ಯಾಕ್  ಇರಲಿದೆ. ಈ ಕೊಡುಗೆ ಇದೇ 19 ರ ತನಕ ಜಾಲ್ತಿಯಲ್ಲಿರುತ್ತದೆ. ಗ್ರಾಹಕರು (FESTIVE) ಕೋಡ್ ಬಳಸಿ ಈ ಕೊಡುಗೆ ಪಡೆಯಬಹುದು ಎಂದು ಸಂಸ್ಥೆ ತಿಳಿಸಿದೆ.

ಲಿಂಕ್ಡ್‌ಇನ್‌: ಡಿಜಿಟಲ್ ಕೌಶಲ್ಯ ಉದ್ಯೋಗಕ್ಕೆ ಬೇಡಿಕೆ

ಡಿಜಿಟಲ್‍ನಿಂದ ಹಿಡಿದು ಕ್ಲೌಡ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್‍ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಿವೆ ಎಂದು ವೃತ್ತಿಪರ ಜಾಲ ಲಿಂಕ್ಡ್‌ಇನ್‌ ವರದಿ ತಿಳಿಸಿದೆ.

ಈ ವರ್ಷದ ಮೊದಲ ಆರು ತಿಂಗಳಲ್ಲಿ ದೇಶದ 14 ಪ್ರಮುಖ ನಗರಗಳ ಪೈಕಿ 8 ನಗರಗಳಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‍ಗಳಿಗೆ ಬೇಡಿಕೆ ಹೆಚ್ಚಿದೆ. ಕೋಡಿಂಗ್ ಮತ್ತು ಡೇಟಾಬೇಸ್‍ನಂತಹ ತಾಂತ್ರಿಕ ಕೌಶಲ್ಯಗಳಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !