ರೋಡ್ ಸೈಕ್ಲಿಂಗ್‌: ವಿಜಯಪುರ ಕ್ರೀಡಾ ನಿಲಯ ಚಾಂಪಿಯನ್‌

7
ಸತತ 11ನೇ ವರ್ಷ ಸಮಗ್ರ ಪ್ರಶಸ್ತಿ

ರೋಡ್ ಸೈಕ್ಲಿಂಗ್‌: ವಿಜಯಪುರ ಕ್ರೀಡಾ ನಿಲಯ ಚಾಂಪಿಯನ್‌

Published:
Updated:
Deccan Herald

ಹುಬ್ಬಳ್ಳಿ: ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಹತ್ತು ವರ್ಷಗಳಿಂದ ಪ್ರಾಬಲ್ಯ ಮೆರೆದುಕೊಂಡು ಬಂದಿರುವ ವಿಜಯಪುರ ಕ್ರೀಡಾ ನಿಲಯ ಈ ಬಾರಿಯೂ ತನ್ನ ಸಾಮರ್ಥ್ಯ ಸಾಬೀತು ಮಾಡಿತು.  ಇಲ್ಲಿ ಎರಡು ದಿನ ನಡೆದ 11ನೇ ರಾಜ್ಯಮಟ್ಟದ ಚಾಂಪಿ ಯನ್‌ಷಿಪ್‌ನಲ್ಲೂ ಸಮಗ್ರ ಪ್ರಶಸ್ತಿ ಬಾಚಿಕೊಂಡಿತು.

ಬಿಡ್ನಾಳ–ಗಬ್ಬೂರು ರಿಂಗ್‌ರೋಡ್‌ ನಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜಯಪುರ ಕ್ರೀಡಾ ನಿಲಯ ಒಟ್ಟು 78 ಅಂಕಗಳನ್ನು ಗಳಿಸಿದರೆ, ವಿಜಯಪುರ ಜಿಲ್ಲಾ ತಂಡದ ಸೈಕ್ಲಿಸ್ಟ್‌ಗಳು 26 ಅಂಕ ಕಲೆಹಾಕಿ ರನ್ನರ್ಸ್‌ ಅಪ್‌ ಆದರು. ಈ ಎರಡೂ ತಂಡಗಳಿಗೆ ಭೀಮಪ್ಪ ವಿಜಯನಗರ ಹಾಗೂ ಅಲ್ಕಾ ಪಡತಾರೆ ತರಬೇತಿ ನೀಡಿದ್ದರು.

ಇಲ್ಲಿ ಪದಕ ಗೆದ್ದ ಸೈಕ್ಲಿಸ್ಟ್‌ಗಳು ಮುಂದಿನ ತಿಂಗಳು ಹರಿಯಾಣದ ಕುರು ಕ್ಷೇತ್ರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಮಡ್ಡಿ ಚುರುಕಿನ ವೇಗ: ಬೆಳಿಗ್ಗೆ  ನಡೆದ 18 ವರ್ಷದ ಒಳಗಿನವರ ಬಾಲಕರ ಮಾಸ್ಡ್‌ ಸ್ಟಾರ್ಟ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ ಬಸವರಾಜ ಮಡ್ಡಿ ಮಿಂಚಿನ ವೇಗದಲ್ಲಿ ಗುರಿ ತಲುಪಿದರು.

50 ಕಿ.ಮೀ. ಗುರಿ ತಲುಪಲು ಒಟ್ಟು ಹತ್ತು  ಲ್ಯಾಪ್‌ಗಳನ್ನು ಪೂರ್ಣಗೊಳಿಸಬೇಕಿತ್ತು. ಮೊದಲ ಆರು ಲ್ಯಾಪ್‌ಗಳು ಪೂರ್ಣಗೊಳ್ಳುವ ತನಕ ಎಲ್ಲ ಸೈಕ್ಲಿಸ್ಟ್‌ಗಳಿಂದ ಸಮಬಲದ ಪೈಪೋಟಿ ಕಂಡುಬಂತು. ಕೊನೆಯ ನಾಲ್ಕು ಲ್ಯಾಪ್‌ಗಳು ಬಾಕಿ ಇರುವಂತೆ ವೇಗ ಹೆಚ್ಚಿಸಿಕೊಂಡ ಮಡ್ಡಿ ರೋಚಕ ಹೋರಾಟದ ನಡುವೆಯೂ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಅವರು ಒಂದು ಗಂಟೆ 15 ನಿಮಿಷ 29.50 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಶನಿವಾರದ ಫಲಿತಾಂಶ: ಪುರುಷರ 10 ಕಿ.ಮೀ. ಮಾಸ್ಡ್‌ ಸ್ಟಾರ್ಟ್‌ (ಇಂಡಿಯನ್‌ ಮೇಡ್‌): ಬಸವರಾಜ ದಳವಾಯಿ (ಬೆಳಗಾವಿ ಜಿಲ್ಲೆ; ಕಾಲ: 16:15.15ಸೆ.)–1, ಪ್ರಭು ಕಾಳತಿಪ್ಪಿ (ಬೆಳಗಾವಿ ಜಿಲ್ಲೆ; 16:15.47ಸೆ.)–2, ಬಸವರಾಜ ಹೊಸೂರು (ಬಾಗಲಕೋಟೆ ಜಿಲ್ಲೆ; 16:16.68ಸೆ.)–3.

18 ವರ್ಷದ ಒಳಗಿನವರ ಬಾಲಕರ ಮಾಸ್ಡ್‌ ಸ್ಟಾರ್ಟ್‌ (50 ಕಿ.ಮೀ.): ಬಸವರಾಜ ಮಡ್ಡಿ (1:15:29.50ಸೆ.)–1, ಮುತ್ತಪ್ಪ ನವಲಳ್ಳಿ (1:15:60.50ಸೆ.)–2, ಸಚಿನ ರಂಜಣಗಿ (ಮೂವರೂ ವಿಜಯಪುರ ಕ್ರೀಡಾ ನಿಲಯ; 1:16:29.50ಸೆ.)–3.

23 ವರ್ಷದ ಒಳಗಿನವರ 80 ಕಿ.ಮೀ. ಮಾಸ್ಡ್‌ ಸ್ಟಾರ್ಟ್‌: ಕರೆಪ್ಪ ಜೊಂಗನವರ (ಬಾಗಲಕೋಟೆ ಜಿಲ್ಲೆ)–1, ನಾಗಪ್ಪ ಮರಡಿ (ಚಂದರಗಿ ಕ್ರೀಡಾಶಾಲೆ)–2, ನಂದೆಪ್ಪ ಸವದಿ (ವಿಜಯಪುರ ಕ್ರೀಡಾನಿಲಯ)–3.

ಪುರುಷರ 80 ಕಿ.ಮೀ. ಮಾಸ್ಡ್ ಸ್ಟಾರ್ಟ್‌: ಯಲಗುರೇಶ ಗಡ್ಡಿ–1, ಶಿವಲಿಂಗಪ್ಪ ಯಳಮಲಿ–2, ಸಂತೋಷ ಕುರಣಿ (ಮೂವರೂ ವಿಜಯಪುರ ಜಿಲ್ಲೆ)–3.

ಬಾಲಕಿಯರ ವಿಭಾಗ: 18 ವರ್ಷದ ಒಳಗಿನವರ 30 ಕಿ.ಮೀ. ಮಾಸ್ಡ್‌ ಸ್ಟಾರ್ಟ್‌: ಸೌಮ್ಯಾ ಅಂತಾಪುರ–1, ಕಾವೇರಿ ಮುರನಾಳ–2, ಸಾವಿತ್ರಿ ಹೆಬ್ಬಾಳಟ್ಟಿ (ಮೂವರೂ ವಿಜಯಪುರ ಕ್ರೀಡಾನಿಲಯ)–3.ಮಹಿಳಾ ವಿಭಾಗ: ರೇಣುಕಾ ದಂಡಿನ (ಗದಗ ಜಿಲ್ಲೆ)–1, ದಾನಮ್ಮ ಗುರುವ (ಬಾಗಲಕೋಟೆ ಜಿಲ್ಲೆ)–2, ಸೌಮ್ಯಾ ಅಂತಾಪುರ (ವಿಜಯಪುರ ಕ್ರೀಡಾನಿಲಯ)–3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !