ವಿಜಯ್ ಹಜಾರೆ: ಸ್ಟಾರ್ ಆಟಗಾರರ ಆಕರ್ಷಣೆ

7
ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ ಎಂಟರ ಘಟ್ಟದ ಪಂದ್ಯಗಳು ಇಂದಿನಿಂದ

ವಿಜಯ್ ಹಜಾರೆ: ಸ್ಟಾರ್ ಆಟಗಾರರ ಆಕರ್ಷಣೆ

Published:
Updated:
Deccan Herald

ಬೆಂಗಳೂರು: ಗೌತಮ್ ಗಂಭೀರ್, ಅಮಿತ್ ಮಿಶ್ರಾ, ರೋಹಿತ್ ಶರ್ಮಾ, ಯಜುವೇಂದ್ರ ಚಾಹಲ್. ಶ್ರೇಯಸ್ ಅಯ್ಯರ್..

ಉದ್ಯಾನನಗರಿಯಲ್ಲಿ ಭಾನುವಾರದಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟದ ಪಂದ್ಯಗಳನ್ನು ವೀಕ್ಷಿಸುವ ಕ್ರಿಕೆಟ್‌ಪ್ರಿಯರಿಗೆ ಈ ತಾರಾ ಆಟಗಾರರಿಗೆ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಏಕೆಂದರೆ ‘ಹಾಲಿ ಚಾಂಪಿಯನ್’ ಆತಿಥೇಯ ಕರ್ನಾಟಕ ತಂಡವು ಲೀಗ್ ಹಂತದಲ್ಲಿಯೇ ಸೋತು ಹೊರಬಿದ್ದಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೆಹಲಿ ಮತ್ತು ಹರಿಯಾಣ, ರಾಜಾನುಕುಂಟೆಯ ಜಸ್ಟ್‌ ಕ್ರಿಕೆಟ್ ಮೈದಾನದಲ್ಲಿ ಮುಂಬೈ ಮತ್ತು ಬಿಹಾರ ತಂಡಗಳು ಮುಖಾಮುಖಿಯಾಗಲಿವೆ. 

ದೆಹಲಿ ತಂಡವು ಗುಂಪು ಹಂತದಲ್ಲಿ ಒಟ್ಟು 28 ಪಾಯಿಂಟ್ಸ್ ಗಳಿಸಿ ಎರಡನೇ ಸ್ಥಾನ ಪಡೆದಿತ್ತು. ಹರಿಯಾಣ ತಂಡ ಕೂಡ ಸಿ ಗುಂಪಿನಲ್ಲಿ 28 ಪಾಯಿಂಟ್ಸ್‌ ಗಳಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಹಾಕಿತ್ತು. ಎರಡೂ ತಂಡಗಳಲ್ಲಿ ದೆಹಲಿಯೇ ತುಸು ಹೆಚ್ಚು ಬಲಶಾಲಿ. ಗೌತಮ್ ಗಂಭೀರ್, ಉನ್ಮುಕ್ತ್ ಚಾಂದ್, ಆಲ್‌ರೌಂಡರ್‌ ಪವನ್ ನೇಗಿ, ನಿತೀಶ್ ರಾಣಾ ಮತ್ತು ಬೌಲರ್‌ ನವದೀಪ್ ಸೈನಿ ಅವರು ಉತ್ತಮ ಆಟಗಾರರಾಗಿದ್ದಾರೆ.

ಹರಿಯಾಣ ತಂಡವು ಸ್ಪಿನ್‌ ಬೌಲಿಂಗ್‌ ಮೇಲೆ ಹೆಚ್ಚು ಅವಲಂಬಿತವಾಗಿದೆ. ನಾಯಕ ಅಮಿತ್ ಮಿಶ್ರಾ, ಯಜುವೇಂದ್ರ ಚಾಹಲ್ ಅವರು ಪ್ರಮುಖ ಬೌಲರ್‌ಗಳಾಗಿದ್ದಾರೆ. ಹರ್ಷಲ್ ಪಟೇಲ್,  ಹಿಮಾಂಶು ರಾಣಾ ಅವರು ಆಲ್‌ರೌಂಡ್ ಆಟದಲ್ಲಿ ಮಿಂಚಬಲ್ಲರು.

ರೋಹಿತ್ ಆಕರ್ಷಣೆ: ಏಷ್ಯಾಕಪ್ ವಿಜಯದ ನಂತರ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ ಮತ್ತೆ ಕಣಕ್ಕೆ ಇಳಿಯಲಿದ್ದಾರೆ. ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಕ್ವಾರ್ಟರ್‌ಫೈನಲ್ ಪ್ರವೇಶಿಸಿರುವ ಮುಂಬೈ ತಂಡಕ್ಕೆ ರೋಹಿತ್ ಸೇರ್ಪಡೆಯಿಂದ ಬಲ ಹೆಚ್ಚಿದಂತಾಗಿದೆ. ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್,  ಅಖಿಲ್ ಹೆರ್ವಾಡ್ಕರ್, ಆದಿತ್ಯ ತಾರೆ ಅವರು ಪಂದ್ಯದ ಫಲಿತಾಂಶವನ್ನು ನಿರ್ಧರಿಸಬಲ್ಲ ಆಟಗಾರರು. ಎದುರಾಳಿ ಬಿಹಾರ ತಂಡವು ಪ್ಲೇಟ್‌ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಎಂಟರ ಘಟ್ಕಕ್ಕೆ ಬಂದಿದೆ. ಮುಂಬೈ ತಂಡದ ಸವಾಲನ್ನು ಎದುರಿಸಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !