ವೆಸ್ಟ್ ಇಂಡೀಸ್ ಎದುರಿನ ಎರಡನೇ ಟೆಸ್ಟ್ ಕ್ರಿಕೆಟ್: ಉತ್ತಮ ಮೊತ್ತದತ್ತ ಕೊಹ್ಲಿ ಬಳಗ

7
: ಶಾ, ಪಂತ್‌ ಮಿಂಚು

ವೆಸ್ಟ್ ಇಂಡೀಸ್ ಎದುರಿನ ಎರಡನೇ ಟೆಸ್ಟ್ ಕ್ರಿಕೆಟ್: ಉತ್ತಮ ಮೊತ್ತದತ್ತ ಕೊಹ್ಲಿ ಬಳಗ

Published:
Updated:
Deccan Herald

ಹೈದರಾಬಾದ್‌: ವೇಗದ ಬೌಲರ್ ಉಮೇಶ್ ಯಾದವ್ ಅವರ ಅಮೋಘ ಬೌಲಿಂಗ್‌ ದಾಳಿಯ ನಂತರ ಯುವ ಬ್ಯಾಟ್ಸ್‌ಮನ್‌ಗಳಾದ ಪೃಥ್ವಿ ಶಾ ಮತ್ತು ರಿಷಭ್ ಪಂತ್ ಅವರ ಉತ್ತಮ ಬ್ಯಾಟಿಂಗ್ ವೆಸ್ಟ್ ಇಂಡೀಸ್ ಎದುರಿನ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ.

ಶತಕ ಸಿಡಿಸಿದ ರಾಸ್ಟನ್‌ ಚೇಸ್ (106; 189 ಎಸೆತ, 1 ಸಿಕ್ಸರ್‌, 8 ಬೌಂಡರಿ) ಸೇರಿದಂತೆ ಒಟ್ಟು ಆರು ವಿಕೆಟ್‌ ಕಬಳಿಸಿದ ಉಮೇಶ್ ಯಾದವ್‌ ಶನಿವಾರ ಬೆಳಿಗ್ಗೆ ವೆಸ್ಟ್ ಇಂಡೀಸ್ ತಂಡ ಬೇಗನೇ ಆಲೌಟ್‌ ಆಗಲು ಕಾರಣರಾದರು.

ಮೊದಲ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಪೃಥ್ವಿ ಶಾ ಉತ್ತಮ ಆರಂಭ ಒದಗಿಸಿದರು. ಆದರೆ ಕೆ.ಎಲ್‌.ರಾಹುಲ್‌ ಮತ್ತೊಮ್ಮೆ ನಿರಾಸೆಗೆ ಒಳಗಾದರು. ತಂಡದ ಮೊತ್ತ 61 ರನ್ ಆಗಿದ್ದಾಗ ರಾಹುಲ್ ಔಟಾದರು. ಅವರು ಗಳಿಸಿದ್ದು ಕೇವಲ ನಾಲ್ಕು ರನ್‌!

ಪೃಥ್ವಿ ಶಾ ಅರ್ಧಶತಕ (70; 53 ಎಸೆತ, 1 ಸಿಕ್ಸರ್‌, 11 ಬೌಂಡರಿ) ಗಳಿಸಿ ಔಟಾದರು. ಚೇತೇಶ್ವರ ಪೂಜಾರ ಕೂಡ ಬೇಗ ವಾಪಸಾದರು. ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಇನ್ನಿಂಗ್ಸ್ ಮುನ್ನಡೆಸಿದರು. ಅರ್ಧಶತಕದತ್ತ ಹೆಜ್ಜೆ ಹಾಕಿದ್ದ ಕೊಹ್ಲಿ ಎದುರಾಳಿ ತಂಡದ ನಾಯಕನಿಗೆ ವಿಕೆಟ್ ಒಪ್ಪಿಸಿದರು.

162 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಗಿದ್ದ ತಂಡಕ್ಕೆ ಅಜಿಂಕ್ಯ ರಹಾನೆ (75; 174 ಎ, 6 ಬೌಂ) ಮತ್ತು ರಿಷಭ್ ಪಂತ್‌ (85; 120 ಎ, 2 ಸಿ, 10 ಬೌಂ) ಆಸರೆಯಾದರು.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !