ಒಳ ಮೀಸಲಾತಿ ಜನಾಂಗವನ್ನು ಬೇರ್ಪಡಿಸುವುದಿಲ್ಲ: ಎಚ್.ಆಂಜನೇಯ

7

ಒಳ ಮೀಸಲಾತಿ ಜನಾಂಗವನ್ನು ಬೇರ್ಪಡಿಸುವುದಿಲ್ಲ: ಎಚ್.ಆಂಜನೇಯ

Published:
Updated:
Deccan Herald

ಬೆಂಗಳೂರು: ‘ಒಳ ಮೀಸಲಾತಿ, ಜನಾಂಗವನ್ನು ಬೇರ್ಪಡಿಸುವುದಿಲ್ಲ. ಬದಲಿಗೆ ಎಲ್ಲಾ ಉಪ ಪಂಗಡಗಳ ಏಳಿಗೆಗೆ ಸಹಕಾರಿಯಾಗುತ್ತದೆ’ ಎಂದು ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯಪಟ್ಟರು.

‘ಅಲೆಮಾರಿ ಬುಡಕಟ್ಟು ಮಹಾಸಭಾ’ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ಅರಿವು ಮತ್ತು ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಒಳ ಮೀಸಲಾತಿ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಪೂರಕವಾಗಿಯೇ ಇದೆ. ತುಳಿತಕ್ಕೆ ಒಳಗಾದ ಸಮಾಜಗಳಲ್ಲೇ ಹಲವಾರು ಪಂಗಡಗಳಿವೆ. ಈ ಪೈಕಿ ಕೆಲವು ಪಂಗಡಗಳು ಆರ್ಥಿಕವಾಗಿ, ರಾಜಕೀಯವಾಗಿ ಬಲಿಷ್ಠವಾಗಿದ್ದರೆ, ಕೆಲವು ಹೇಳ ಹೆಸರಿಲ್ಲದಂತಾಗಿದೆ. ಒಳ ಮೀಸಲಾತಿ ತರುವ ಮೂಲಕ ಎಲ್ಲಾ ವರ್ಗಗಳಿಗೂ ಪ್ರಾತಿನಿಧ್ಯ ದೊರಕಿಸಕೊಡಲು ಸಾಧ್ಯವಾಗುತ್ತದೆ’ ಎಂದರು.

‘ಜನಸಂಖ್ಯೆ ಆಧಾರದಲ್ಲಿ ಪ್ರತಿ ಜನಾಂಗಕ್ಕೂ ಪ್ರಾತಿನಿಧ್ಯ ಕಲ್ಪಿಸಬೇಕು. ಆಗ ಮಾತ್ರ ಸಾಮಾಜಿಕ ನ್ಯಾಯದ ಫಲವನ್ನು ಪ್ರತಿಯೊಬ್ಬರೂ ಸವಿಯಲು ಅವಕಾಶ ದೊರೆಯುತ್ತದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !