ಶುಕ್ರವಾರ, ಅಕ್ಟೋಬರ್ 18, 2019
26 °C

ಸೈಕ್ಲಿಂಗ್: ಯಲಗುರೇಶ್, ಸೌಮ್ಯಾ ಚಾಂಪಿಯನ್

Published:
Updated:

ಮೈಸೂರು: ವಿಜಯಪುರದ ಯಲಗುರೇಶ್‌ ಗಡ್ಡಿ ಮತ್ತು ಸೌಮ್ಯಾ ಅಂತಪುರ್ ಅವರು ದಸರಾ ಸೈಕ್ಲಿಂಗ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆದರು.

ಮೈಸೂರಿನ ವರುಣಾ ಗ್ರಾಮದಲ್ಲಿ ಮಂಗಳವಾರ ನಡೆದ ಪುರುಷರ ವಿಭಾಗದ 80 ಕಿ.ಮೀ. ಸ್ಪರ್ಧೆಯನ್ನು ಯಲಗುರೇಶ್ 2 ಗಂಟೆ 15 ನಿ. 30 ಸೆಕೆಂಡುಗಳಲ್ಲಿ ಪೂರೈಸಿದರು. ಬೆಳಗಾವಿಯ ನಾಗಪ್ಪ ಮರಡಿ (2 ಗಂ. 15 ನಿ.32 ಸೆ.) ಎರಡನೇ ಸ್ಥಾನ ಪಡೆದರೆ, ವಿಜಯಪುರದ ನಂದೆಪ್ಪ ಸವಡಿ (2 ಗಂ. 15 ನಿ. 33 ಸೆ.) ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ಮಹಿಳೆಯರ ವಿಭಾಗದಲ್ಲಿ ಸೌಮ್ಯಾ ಅವರು 40 ಕಿ.ಮೀ ದೂರವನ್ನು 1 ಗಂ. 15 ನಿ. 14 ಸೆಕೆಂಡುಗಳಲ್ಲಿ ಕ್ರಮಿಸಿದರು. ವಿಜಯಪುರದ ಕಾವೇರಿ ಮುರ್ನಾಳ್ (1 ಗಂ. 15 ನಿ. 18 ಸೆ.) ಮತ್ತು ಬಾಗಲಕೋಟೆಯ ರೇಣುಕಾ ದಂಡಿನ್ (1 ಗಂ. 15 ನಿ. 20 ಸೆ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡರು.

Post Comments (+)