ಅಜರ್‌ ಅಲಿ ‘ರೋಚಕ’ ರನ್‌ ಔಟ್‌!

7
ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಕುತೂಹಲಕಾರಿ ಪ್ರಸಂಗ

ಅಜರ್‌ ಅಲಿ ‘ರೋಚಕ’ ರನ್‌ ಔಟ್‌!

Published:
Updated:
Deccan Herald

ಅಬುಧಾಬಿ: ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಪಾಕಿಸ್ತಾನದ ಎರಡನೇ ಇನಿಂಗ್ಸ್‌ನ 53ನೇ ಓವರ್‌ನಲ್ಲಿ ಅಜರ್ ಅಲಿ ‘ರೋಚಕ’ವಾಗಿ ರನ್‌ ಔಟಾದರು.

ಮೂರನೇ ದಿನವಾದ ಗುರುವಾರ ಪೀಟರ್ ಸಿಡ್ಲ್‌ ಹಾಕಿದ ಓವರ್‌ನ ಮೂರನೇ ಎಸೆತವನ್ನು ಬಲಗೈ ಬ್ಯಾಟ್ಸ್‌ಮನ್‌ ಅಜರ್ ಅಲಿ ಥರ್ಡ್ ಮ್ಯಾನ್‌ ಕಡೆಗೆ ಸ್ಟಿಯರ್ ಮಾಡಿದ್ದರು. ಚೆಂಡು ವೇಗವಾಗಿ ಬೌಂಡರಿ ಗೆರೆಯ ಕಡೆಗೆ ಧಾವಿಸಿತು.

ಅದು ಬೌಂಡರಿಯಾಚೆ ಸಾಗಿದೆ ಎಂದು ತಿಳಿದುಕೊಂಡ ಅಜರ್ ಅಲಿ ಮತ್ತು ಆಜಾದ್ ಶಫೀಕ್‌ ಕ್ರೀಸ್‌ನಲ್ಲಿ ಮಾತನಾಡುತ್ತ ನಿಂತಿದ್ದರು. ಆದರೆ ಚೆಂಡು ಬೌಂಡರಿ ಗೆರೆಯ ಬಳಿಯಲ್ಲಿ ನಿಂತಿತು. ಮಿಷೆಲ್ ಸ್ಟಾರ್ಕ್ ಅದನ್ನು ಹೆಕ್ಕಿ ವಿಕೆಟ್ ಕೀಪರ್ ಟಿಮ್ ಪೇನ್‌ ಅವರತ್ತ ಎಸೆದರು. ಪೇನ್‌, ಬೇಲ್ಸ್ ಎಗರಿಸಿದರು. ಆಸ್ಟ್ರೇಲಿಯಾ ತಂಡ ದವರು ಸಂಭ್ರಮಿಸಿದಾಗಲೇ ಅಜರ್‌ಗೆ ತಾನು ರನ್ ಔಟಾಗಿರುವುದು ತಿಳಿದದ್ದು!

ಪಾಕಿಸ್ತಾನಕ್ಕೆ ಭರ್ಜರಿ ಜಯ: ಪಂದ್ಯದಲ್ಲಿ ಪಾಕಿಸ್ತಾನ 373 ರನ್‌ ಗಳಿಂದ ಗೆದ್ದಿತು. ಮೊದಲ ಇನಿಂಗ್ಸ್‌ನಲ್ಲಿ 137 ರನ್‌ಗಳ ಮುನ್ನಡೆ ಸಾಧಿಸಿದ್ದ ಪಾಕಿಸ್ತಾನ ಎರಡನೇ ಇನಿಂಗ್ಸ್‌ ಅನ್ನು 400 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. 538 ರನ್‌ಗಳ ಗೆಲು ವಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಮೊಹಮ್ಮದ್ ಅಬ್ಬಾಸ್ ಮತ್ತು ಯಾಸಿರ್ ಶಾ ಅವರ ಪರಿಣಾಮಕಾರಿ ದಾಳಿಗೆ ನಲುಗಿ 164 ರನ್‌ಗಳಳಿಗೆ ಆಲೌಟಾಯಿತು.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 282 ಮತ್ತು 9ಕ್ಕೆ 400 ಡಿಕ್ಲೇರ್‌; ಆಸ್ಟ್ರೇಲಿಯಾ: 145 ಮತ್ತು 49.4 ಓವರ್‌ಗಳಲ್ಲಿ 164 (ಆ್ಯರನ್ ಫಿಂಚ್‌ 31, ಟ್ರಾವಿಸ್ ಹೆಡ್‌ 36, ಲಬುಚಾನೆ 43, ಮಿಷೆಲ್ ಸ್ಟಾರ್ಕ್‌ 28; ಮೊಹಮ್ಮದ್ ಅಬ್ಬಾಸ್‌ 62ಕ್ಕೆ5, ಯಾಸಿರ್ ಶಾ 45ಕ್ಕೆ3). ಫಲಿತಾಂಶ: ಪಾಕಿಸ್ತಾನಕ್ಕೆ 373 ರನ್‌ಗಳ ಜಯ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !