ಸೋಮವಾರ, ಜೂನ್ 14, 2021
26 °C

ಕಪಿಗಳ ಕವಿಗೋಷ್ಠಿ

ಡಾ.ಕೆ.ಬಿ.ರಂಗಸ್ವಾಮಿ Updated:

ಅಕ್ಷರ ಗಾತ್ರ : | |

Deccan Herald

ಕಾಡಿನ ಕೆಲ ಕಪಿಗಳು
ನಾಡಿಗೆ ಓಡಿಬಂದವು
ವಿದ್ಯೆ ಕಲಿತು ಜಾಣರಾಗಿ
ಮರಳಿ ಕಾಡು ಸೇರಿದವು 

ಸೃಜನ ಮನದ ಕಪಿಗಳು
ಕವನಗಳ ರಚಿಸಿದವು
ತಿದ್ದಿ ತಿದ್ದಿ ತೀಡಿ ತೀಡಿ
ಕವಿಗಳೆನಿಸಿಕೊಂಡವು

ಹಿರಿಯ ಕಿರಿಯ ಕಪಿಗಳು
ಒಮ್ಮೆ ಕುಳಿತು ಚರ್ಚಿಸಿದವು
ಕವಿಗೋಷ್ಠಿ ಆಯೋಜಿಸಲು
ಒಮ್ಮತದಿಂದ  ಸಮ್ಮತಿಸಿದವು

ಹಿರಿಯ ಕಪಿಗೆ ಒಪ್ಪಿಸಿ
ಅಧ್ಯಕ್ಷಗಿರಿ ನೀಡಿದವು
ಲಗುಬಗೆಯಲಿ ಓಡಾಡಿ
ಸ್ಟೇಜು ಕುರ್ಚಿ ಜೋಡಿಸಿದವು

ಹನಿಗವನ ಇಡಿಗವನ
ಉತ್ಸಾಹದಲಿ ವಾಚಿಸಿದವು
ಮಿಕ್ಕ ಕಪಿಗಳೆಲ್ಲಾ ಕುಳಿತು
ಆಸ್ವಾದಿಸಿ ಆನಂದಿಸಿದವು

ವಾಚಿಸಿದ ಕಪಿಗಳಿಗೆ
ಕಾಣಿಕೆಯಿತ್ತು ಗೌರವಿಸಿದವು
ಮಾವು ಹಲಸು ದ್ರಾಕ್ಷಿ ಸವಿದು
ಸಂತೃಪ್ತಿಯಲಿ ಬೀಗಿದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.