ರಣಜಿ ಟ್ರೋಫಿ: ಮಾಸ್ಕ್‌ ಧರಿಸಿ ಬ್ಯಾಟಿಂಗ್ ಮಾಡಿದ ಲಾಡ್

7

ರಣಜಿ ಟ್ರೋಫಿ: ಮಾಸ್ಕ್‌ ಧರಿಸಿ ಬ್ಯಾಟಿಂಗ್ ಮಾಡಿದ ಲಾಡ್

Published:
Updated:

ನವದೆಹಲಿ: ಗುರುವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟ್ಸ್‌ಮನ್ ಸಿದ್ಧೇಶ್ ಲಾಡ್ ಅವರು ಮುಖಕ್ಕೆ ಮಾಸ್ಕ್‌ ಧರಿಸಿ ಬ್ಯಾಟಿಂಗ್ ಮಾಡಿದರು.

ದೆಹಲಿಯ ಮಾಲಿನ್ಯಯುಕ್ತ ಗಾಳಿಯನ್ನು ಉಸಿರಾಡುವುದರಿಂದ ರಕ್ಷಿಸಿಕೊಳ್ಳಲು ಅವರು ಈ ತಂತ್ರ ಅನುಸರಿಸಿದರು ಎಂದು ತಂಡದ ಮೂಲಗಳು ಹೇಳಿವೆ. ಸಿದ್ಧೇಶ್ (ಬ್ಯಾಟಿಂಗ್ 80) ಮತ್ತು ಸೂರ್ಯಕುಮಾರ್ ಯಾದವ್ (83 ರನ್) ಆವರ ಉತ್ತಮ ಬ್ಯಾಟಿಂಗ್ ಬಲದಿಂದ ಗುರುವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಮುಂಬೈ ತಂಡವು ಉತ್ತಮ ಮೊತ್ತ ಗಳಿಸುವತ್ತ ಹೆಜ್ಜೆಯಿಟ್ಟಿದೆ.

ಕರ್ನೈಲ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು ದಿನದಾಟದ ಅಂತ್ಯಕ್ಕೆ 80 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 278 ರನ್‌ ಗಳಿಸಿತು.

ಮಹಾರಾಷ್ಟ್ರ ಉತ್ತಮ ಆರಂಭ: ಚಿರಾಗ್ ಖುರಾನಾ (89 ರನ್) ಅವರ ಉತ್ತಮ ಬ್ಯಾಟಿಂಗ್ ಬಲದಿಂದ ಮಹಾರಾಷ್ಟ್ರ ತಂಡವು ಹಾಲಿ ಚಾಂಪಿಯನ್ ವಿದರ್ಭ ಎದುರಿನ ಪಂದ್ಯದಲ್ಲಿ  90 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 284 ರನ್ ಗಳಿಸಿದೆ.

 ಎಲೀಟ್ ‘ಎ’ ಗುಂಪಿನ ಸಂಕ್ಷಿಪ್ತ ಸ್ಕೋರುಗಳು

ಮೊದಲ ಇನಿಂಗ್ಸ್‌: ಮುಂಬೈ: 80 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 278 (ಜೈ ಗೋಕುಲ್ ಬಿಷ್ಟಾ 47, ಆಶಯ್ ಸರ್ದೇಸಾಯಿ 19, ಸೂರ್ಯಕುಮಾರ್ ಯಾದವ್ 83, ಸಿದ್ಧೇಶ್ ಲಾಡ್ ಬ್ಯಾಟಿಂಗ್ 80, ಶಿವಂ ದುಬೆ ಬ್ಯಾಟಿಂಗ್ 35, ಅನುರೀತ್ ಸಿಂಗ್ 55ಕ್ಕೆ3, ಅವಿನಾಶ್ ಯಾದವ್ 68ಕ್ಕೆ2) ರೈಲ್ವೆಸ್ ಎದುರು. ಸ್ಥಳ ; ನವದೆಹಲಿ.

ಮಹಾರಾಷ್ಟ್ರ: 90 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 284 (ಸ್ವಪ್ನಿಲ್ ಗುಗಳೆ 47, ಚಿರಾಗ್ ಖುರಾನಾ 89, ರುತುರಾಜ್ ಗಾಯಕವಾಡ 47, ನೌಷಾದ ಶೇಖ್ 40, ರಾಹುಲ್ ತ್ರಿಪಾಠಿ ಬ್ಯಾಟಿಂಗ್ 36, ಆದಿತ್ಯ ಸರವಟೆ 50ಕ್ಕೆ2, ಅಕ್ಷಯ್ ವಾಖರೆ 47ಕ್ಕೆ2) ವಿದರ್ಭ ಎದುರಿನ ಪಂದ್ಯ. ಸ್ಥಳ: ಪುಣೆ

ಬರೋಡಾ: 81.2 ಓವರ್‌ಗಳಲ್ಲಿ 290 (ಆದಿತ್ಯ ವಾಘ್ಮೋಡೆ 46, ವಿಷ್ಣು ಸೋಳಂಕಿ 30, ದೀಪಕ್ ಹೂಡಾ 63, ಯೂಸುಫ್ ಪಠಾಣ್ 69, ಪಿನಾಲ್ ಶಾ 27, ಅತೀತ್ ಶೇಟ್ 16, ಸಿದ್ಧಾರ್ಥ್ ದೇಸಾಯಿ 109ಕ್ಕೆ5, ಪಿಯೂಷ್ ಚಾವ್ಲಾ 58ಕ್ಕೆ3) ಗುಜರಾತ್: 4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 15 (ಸುಮಿತ್ ಗೊಯೆಲ್ ಬ್ಯಾಟಿಂಗ್ 8, ಪ್ರಿಯಾಂಕ್ ಪಾಂಚಾಲ್ ಬ್ಯಾಟಿಂಗ್ 7).–ಸ್ಥಳ: ವಡೋದರಾ.

ಸೌರಾಷ್ಟ್ರ: 90 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 282 (ಹಾರ್ವಿಕ್ ದೇಸಾಯಿ 78, ಸ್ನೆಲ್ ಪಟೇಲ್ 91, ಚೇತೇಶ್ವರ್ ಪೂಜಾರ 30, ಶೆಲ್ಡನ್ ಜಾಕ್ಸನ್ ಬ್ಯಾಟಿಂಗ್ 49, ಜಯದೇವ್ ಶಾ 21, ಅರ್ಪಿತ್ ವಾಸವೇದಾ ಬ್ಯಾಟಿಂಗ್ 13, ಸುಮಿತ್ ರಾಯಕರ್ 76ಕ್ಕೆ1, ಓಂಕಾರ್ ವರ್ಮಾ 70ಕ್ಕೆ1, ಸಾಹಿಲ್ ಗುಪ್ತಾ 27ಕ್ಕೆ1) ಛತ್ತೀಸಗಡ ಎದುರು, ಸ್ಥಳ: ರಾಜ್‌ಕೋಟ್.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !