‘ಸುಪ್ರೀಂ’ನಿಂದಲೇ ನೇಮಕಾತಿ ಎಚ್ಚರಿಕೆ

7

‘ಸುಪ್ರೀಂ’ನಿಂದಲೇ ನೇಮಕಾತಿ ಎಚ್ಚರಿಕೆ

Published:
Updated:

ನವದೆಹಲಿ: ದೇಶದಾದ್ಯಂತ ಜಿಲ್ಲಾ ನ್ಯಾಯಾಲಯಗಳಲ್ಲಿ ಖಾಲಿ ಇರುವ 5,000 ನ್ಯಾಯಾಧೀಶರ ಹುದ್ದೆಗಳನ್ನು ನಿಗದಿತ ಅವಧಿಯೊಳಗೆ ಭರ್ತಿ ಮಾಡದಿದ್ದರೆ ಕೇಂದ್ರೀಕೃತ ಆಯ್ಕೆ ವ್ಯವಸ್ಥೆ ಜಾರಿಗೆ ತರಬೇಕಾಗುತ್ತದೆ ಎಂದು ರಾಜ್ಯಗಳಿಗೆ ಹಾಗೂ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್‌ ಗುರುವಾರ ಎಚ್ಚರಿಕೆ ನೀಡಿದೆ.

‘ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯನ್ನು ನಾವು ನಿರಂತರವಾಗಿ ಗಮನಿಸುತ್ತಿದ್ದೇವೆ. ಕೇಂದ್ರೀಕೃತ ಆಯ್ಕೆ ಪ್ರಕ್ರಿಯೆ ಮೂಲಕ ನಾವೇ ನೇರವಾಗಿ ನೇಮಕಾತಿ ಮಾಡಬಹುದು’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಹೇಳಿದರು.

ನ್ಯಾಯಾಧೀಶರ ಖಾಲಿ ಹುದ್ದೆಗಳ ಕುರಿತ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಪೀಠವು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿತು. ಹುದ್ದೆಗಳ ಭರ್ತಿ ಮಾಡಲು ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿತು.

‘ನ್ಯಾಯಾಧೀಶರ ನೇಮಕಾತಿ ಕುರಿತು ಲೋಕಸೇವಾ ಆಯೋಗವು ಆಸಕ್ತಿ ತೋರುತ್ತಿಲ್ಲ. ಯಾವುದೇ ಹೈಕೋರ್ಟ್‌ ಇದಕ್ಕೆ ಹೊರತಾಗಿಲ್ಲ ಮತ್ತು ರಾಜ್ಯಗಳು ಒದಗಿಸಿದ ಮಾಹಿತಿಯೂ ಅಸ್ಪಷ್ಟವಾಗಿದೆ’ ಎಂದು ಪೀಠವು ಹೇಳಿದೆ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !