ಲೇಹ್‌ನಲ್ಲಿ ವಾಯುನಿಯಂತ್ರಿತ ರೈಲ್ವೆ ಬೋಗಿ

7

ಲೇಹ್‌ನಲ್ಲಿ ವಾಯುನಿಯಂತ್ರಿತ ರೈಲ್ವೆ ಬೋಗಿ

Published:
Updated:
Deccan Herald

ಭಾರತ–ಚೀನಾ ಗಡಿಯಲ್ಲಿರುವ ಜಗತ್ತಿನ ಅತಿ ಎತ್ತರದ ರೈಲ್ವೆ ಮಾರ್ಗದಲ್ಲಿ ಗಾಳಿಯ ಒತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯದ ಬೋಗಿಗಳ ರೈಲು ಓಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಚೀನಾದ ಕ್ವಿಂಗ್‌ಹೇ–ಟಿಬೆಟ್ ಮಾರ್ಗದಲ್ಲಿ ಇಂತಹ ಬೋಗಿಗಳನ್ನು ಈಗಾಗಲೇ ಬಳಸಲಾಗುತ್ತಿದೆ. 

ಯಾವ ಮಾರ್ಗ? 

ಬಿಲಾಸ್‌ಪುರ–ಮನಾಲಿ–ಲೇಹ್

ಸಂಪರ್ಕ ಎಲ್ಲೆಲ್ಲಿ?:

ಬಿಲಾಸ್‌ಪುರ, ಮನಾಲಿ, ಲೇಹ್, ಸುಂದರ್‌ನಗರ, ಮಂಡಿ, ಕೆಲಾಂಗ್, ಕೊಕ್ಸರ್, ದಾರ್ಚ್, ಉಪ್ಸಿ ಹಾಗೂ ಹಿಮಾಚಲ ಪ್ರದೇಶ ಮತ್ತು ಜಮ್ಮು–ಕಾಶ್ಮೀರದ ಕೆಲವು ನಗರಗಳನ್ನೂ ಈ ಮಾರ್ಗ ಸಂಪರ್ಕಿಸುತ್ತದೆ

 ಅಂಕಿ–ಅಂಶ

5360 ಮೀಟರ್

ಸಮುದ್ರಮಟ್ಟದಿಂದ ಲೇಹ್ ಇರುವ ಎತ್ತರ

465 ಕಿ.ಮೀ

ರೈಲ್ವೆ ಮಾರ್ಗದ ಉದ್ದ

₹53,360

ರೈಲ್ವೆ ಮಾರ್ಗ ಯೋಜನೆಯ ವೆಚ್ಚ

 ಲೇಹ್‌ನಲ್ಲಿ ಏಕೆ?

ಸಮುದ್ರದ ಮಟ್ಟದಿಂದ ಅತಿ ಎತ್ತರದಲ್ಲಿರುವ ಲೇಹ್‌ನಲ್ಲಿ ಗಾಳಿಯ ಪ್ರಮಾಣ ಕಡಿಮೆ ಇದೆ. ಹೀಗಾಗಿ ಗಾಳಿಯ ಒತ್ತಡವನ್ನು ಕೃತಕವನ್ನು ನಿಯಂತ್ರಿಸುವ ಬೋಗಿಗಳನ್ನು ತಯಾರಿಸಲಾಗುತ್ತಿದೆ. 

ವಿಮಾನಗಳಲ್ಲಿ ಈ ವ್ಯವಸ್ಥೆ ಇದೆ 

ಎಲ್ಲ ವಿಮಾನಗಳಲ್ಲೂ ಈ ತಂತ್ರಜ್ಞಾನ ಇದೆ. ಆಗಸದಲ್ಲಿ ಗಾಳಿಯ ಒತ್ತಡವನ್ನು ತಾಳಿಕೊಳ್ಳುವಂತೆ ವಿಮಾನ ಒಳಭಾಗವನ್ನು ತಯಾರಿಸಲಾಗಿರುತ್ತದೆ. ಸಮುದ್ರಮಟ್ಟದಲ್ಲಿ ಇರುವ ಗಾಳಿಯ ಒತ್ತಡವನ್ನು ಇಲ್ಲಿ ಸೃಷ್ಟಿಸಲಾಗುತ್ತದೆ. ಹೀಗಾಗಿ ಪ್ರಯಾಣಿಕರ ಉಸಿರಾಟಕ್ಕೆ ತೊಂದರೆಯಾಗುವುದಿಲ್ಲ. 

ಉಪಯೋಗ ಮತ್ತು ಕಾರ್ಯಾಚರಣೆ

ಎತ್ತರದ ಜಾಗದಲ್ಲಿ ಪ್ರಯಾಣಿಕರಿಗೆ ಉಸಿರಾಟದ ಸಮಸ್ಯೆ ಎದುರಾಗುವುದಿಲ್ಲ

ಬೋಗಿಯ ಒಳಗಡೆ ಆಮ್ಲಜನಕದ ಪ್ರಮಾಣ ಸಮಸ್ಥಿತಿಯಲ್ಲಿರುವಂತೆ ಕಾಯ್ದುಕೊಳ್ಳಲಾಗುತ್ತದೆ

ಆಮ್ಲಜನಕ ಪೂರೈಸಲು ಎರಡು ರೀತಿಯ ವ್ಯವಸ್ಥೆ ಇರಲಿವೆ

ಚೀನಾದ ರೈಲ್ವೆ ಬೋಗಿಗಳನ್ನು ಕೆನಡಾದ ಬೊಂಬಾರ್ಡಿಯರ್ ಕಂಪನಿ ತಯಾರಿಸಿತ್ತು

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !