ಗೋಮಾಂಸದ ಖಾದ್ಯ ಬೇಡವೆಂದ ಬಿಸಿಸಿಐ?

7

ಗೋಮಾಂಸದ ಖಾದ್ಯ ಬೇಡವೆಂದ ಬಿಸಿಸಿಐ?

Published:
Updated:

ಮುಂಬೈ: ಇದೇ ತಿಂಗಳು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದ ಊಟದಲ್ಲಿ ಗೋಮಾಂಸದ ಖಾದ್ಯಗಳು ಬೇಡ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರಿಕೆಟ್‌ ಆಸ್ಟ್ರೇಲಿಯಾಕ್ಕೆ ಮನವಿ ಸಲ್ಲಿಸಿದೆ.

ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಟೆಸ್ಟ್, ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ. ಆಟಗಾರರು, ಅಧಿಕಾರಿಗಳು ಮತ್ತು ನೆರವು ಸಿಬ್ಬಂ ದಿಯ ಆತಿಥ್ಯಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಸಿದ್ಧತೆ ನಡೆಸಿದೆ. ಅದಕ್ಕಾಗಿ ಊಟ–ತಿಂಡಿಯ ಮೆನುವನ್ನು ಬಿಸಿಸಿಐಗೆ ಕಳುಹಿಸಿತ್ತು. ಅದರಲ್ಲಿ ಗೋಮಾಂಸ ಖಾದ್ಯಗಳೂ ಇದ್ದವು ಎನ್ನಲಾಗಿದೆ.

ನವೆಂಬರ್ 21 ರಿಂದ ಜನವರಿ 18 ವರೆಗೆ ಆಸ್ಟ್ರೇಲಿಯಾದಲ್ಲಿ ಭಾರತ ಸರಣಿ ಆಡಲಿದೆ. ಈಚೆಗೆ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಭಾರತದ ಆಟಗಾರರು ಬೀಫ್ ಪಾಸ್ತಾ ನಿರಾಕರಿಸಿದ್ದರು.

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !