ಹಿಮೊಗ್ಲೋಬಿನ್ ಮಟ್ಟ 10ಕ್ಕಿಂತ ಕಡಿಮೆ

7
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ: ಶೇ 60ರಷ್ಟು ವಿದ್ಯಾರ್ಥಿನಿಯರಿಗೆ ಅಪೌಷ್ಟಿಕತೆ

ಹಿಮೊಗ್ಲೋಬಿನ್ ಮಟ್ಟ 10ಕ್ಕಿಂತ ಕಡಿಮೆ

Published:
Updated:
Deccan Herald

ಬಾಗಲಕೋಟೆ: ‘ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಓದುವ ಹೆಣ್ಣುಮಕ್ಕಳಲ್ಲಿ ಶೇ 60ರಷ್ಟು ಮಂದಿಗೆ ಹಿಮೊಗ್ಲೋಬಿನ್ (ಎಚ್‌ಬಿ) ಮಟ್ಟ 10ಕ್ಕಿಂತ ಕಡಿಮೆ ಇರುವುದು ಆರೋಗ್ಯ ಪರೀಕ್ಷೆ ವೇಳೆ ಗೊತ್ತಾಗಿದೆ. ಇದು ಅಪೌಷ್ಟಿಕತೆಯ ಗಂಭೀರತೆಯನ್ನು ಬಿಂಬಿಸುತ್ತದೆ’ ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆರ್.ಸುನಂದಮ್ಮ ಹೇಳಿದರು.

ಇಲ್ಲಿನ ಬಿ.ವಿ.ವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗ ಉದ್ಘಾಟಿಸಿ ಮಾತನಾಡಿದ ಅವರು, ‘ಹೆಣ್ಣು ಮಕ್ಕಳ ಆರೈಕೆ ಸಮಾಜದ ಹೊಣೆಗಾರಿಕೆ. ಸಮಾಜ ಕಟ್ಟುವ ಮಕ್ಕಳನ್ನು ನಾವು ಹೆರುತ್ತೇವೆ. ಉತ್ಪಾದಕರನ್ನು ಉತ್ಪಾದಿಸುವ ಯಂತ್ರಗಳು ನಾವು. ಅಂತಹ ನಮ್ಮನ್ನು ಯಂತ್ರಕ್ಕಿಂತ ಚೆನ್ನಾಗಿ ನೋಡಿಕೊಳ್ಳಬೇಕು’ ಎಂದರು.

‘ಮನೆಯಲ್ಲಿ ಎಲ್ಲರೂ ಉಂಡ ಮೇಲೆ ಹೆಣ್ಣು ಮಕ್ಕಳು ಉಣ್ಣಬೇಕು. ಬೇರೆಯವರಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅಡುಗೆ ಉಳಿದರೆ ಮಾತ್ರ ಆಕೆ ತಿನ್ನಬೇಕು ಎಂಬ ಅಲಿಖಿತ ನಂಬಿಕೆಗಳು ನಮ್ಮೊಳಗೆ ಇವೆ. ಇದು ಕೂಡ ಆಕೆಯಲ್ಲಿ ರಕ್ತದ ಕೊರತೆಗೆ ಕಾರಣ. ಈ ವಿಚಾರದಲ್ಲಿ ಗಂಡಸರ ಧೋರಣೆ ಬದಲಾಗಿ ಒಟ್ಟಾಗಿ ಹಂಚಿಕೊಂಡು ತಿನ್ನುವ ಭಾವನೆ ಬರಬೇಕು’ ಎಂದು ಕಿವಿಮಾತು ಹೇಳಿದರು.

‘ಹೆಣ್ಣು ಮಕ್ಕಳನ್ನು ಓದಿಸುವುದು ಪಕ್ಕದ ಮನೆಯವರ ಗಿಡಕ್ಕೆ ನೀರು ಹಾಕಿದಂತೆ ಎಂಬ ಭಾವನೆ ಸಲ್ಲ’ ಎಂದಾಗ, ಅದಕ್ಕೆ ವೇದಿಕೆಯಲ್ಲಿದ್ದ ಶಾಸಕ ವೀರಣ್ಣ ಚರಂತಿಮಠ ಪ್ರತಿಕ್ರಿಯಿಸಿ, ‘ಬಿ.ವಿ.ವಿ ಸಂಘದ ದಂತ ವೈದ್ಯಕೀಯ ಕಾಲೇಜಿನಲ್ಲಿ ಈ ವರ್ಷ 100 ವಿದ್ಯಾರ್ಥಿಗಳ ಪೈಕಿ 88 ಮಂದಿ ಹೆಣ್ಣು ಮಕ್ಕಳೇ ಇದ್ದಾರೆ. ಇದೊಂದು ಸಕಾರಾತ್ಮಕ ಬೆಳವಣಿಗೆ’ ಎಂದರು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !