ಉದ್ಯೋಗ ಸೃಷ್ಟಿಗೆ ಕಾರಣವಾಗಿ: ಅಮಿತಾಭ್‌ ಕಾಂತ್‌

7
ಯುವಕರಿಗೆ ನೀತಿ ಆಯೋಗದ ಸಿಇಒ ಸಲಹೆ

ಉದ್ಯೋಗ ಸೃಷ್ಟಿಗೆ ಕಾರಣವಾಗಿ: ಅಮಿತಾಭ್‌ ಕಾಂತ್‌

Published:
Updated:
Deccan Herald

ಬೆಂಗಳೂರು: ‘ವಿದ್ಯಾರ್ಥಿಗಳು ಸರ್ಕಾರಿ ಕೆಲಸಕ್ಕೆ ಕಾಯದೇ ಸ್ವಂತ ಉದ್ಯೋಗ ಮಾಡುವ ಮೂಲಕ ಇತರರಿಗೂ ಅವಕಾಶ ನೀಡುವಷ್ಟು ಎತ್ತರಕ್ಕೆ ಬೆಳೆಯಬೇಕು’ ಎಂದು ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಹೇಳಿದರು. ಹೈದರಾಬಾದ್‌ನಲ್ಲಿ ಇತ್ತೀಚೆಗೆ ಐಸಿಎಫ್‌ಎಐ ಫೌಂಡೇಷನ್‌ ಫಾರ್ ಹೈಯರ್ ಎಜುಕೇಷನ್‌ (ಐಎಫ್‌ಎಚ್‌ಇ) ಆಯೋಜಿಸಿದ್ದ ‘ಎನ್‌.ಜೆ. ಯಶಸ್ವಿ ಸ್ಮಾರಕ ಉಪನ್ಯಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತ ಸತತ ಮೂರು ದಶಕಗಳವರೆಗೆ ಶೇ 10ರ ದರದಲ್ಲಿ ಅಭಿವೃದ್ಧಿ ಹೊಂದಿದರೆ ಮಾತ್ರ ಬಡತನ ದೂರವಾಗಲಿದೆ. ಇಲ್ಲಿ ಯುವಜನ ಹೆಚ್ಚಿರುವುದು ಸಾಕಷ್ಟು ಹೊಸ ಸವಾಲುಗಳು ಮತ್ತು ಅವಕಾಶಗಳನ್ನು ಸೃಷ್ಟಿಸಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

‘ಡಿಜಿಟಲೀಕರಣದಿಂದ ವ್ಯವಸ್ಥೆ ಸರಳೀಕರಣಗೊಂಡಿದೆ. ಅಲ್ಲದೇ, ಇದರಿಂದ ಪಾರದರ್ಶಕತೆ ಹೆಚ್ಚಿದೆ. ರಾಜ್ಯಗಳ ನಡುವೆ ಸಮನ್ವಯತೆ ಇದ್ದರೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸುಲಭ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !