ಗುರುವಾರ , ಡಿಸೆಂಬರ್ 12, 2019
26 °C

ರಿಸರ್ವ್‌ ಬ್ಯಾಂಕ್‌ ಸ್ವಾಯತ್ತತೆ ‘ಐಎಂಎಫ್‌’ ಬೆಂಬಲ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ವಿಶ್ವದ ಯಾವುದೇ ಭಾಗದಲ್ಲಿ ಕೇಂದ್ರೀಯ ಬ್ಯಾಂಕ್‌ಗಳ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ರಾಜಿಮಾಡಿಕೊಳ್ಳುವ   ಪ್ರಯತ್ನಗಳನ್ನು ತಾನು ಬಲವಾಗಿ ವಿರೋಧಿಸುವುದಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ತಿಳಿಸಿದೆ.

ಸ್ವಾಯತ್ತತೆಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರ ಸರ್ಕಾರ ಮಧ್ಯೆ ಜಟಾಪಟಿ ನಡೆಯುತ್ತಿದೆ. ಈ ಬೆಳವಣಿಗೆಗೆ ಐಎಂಎಫ್‌ ಪ್ರತಿಕ್ರಿಯಿಸಿ ಆರ್‌ಬಿಐನ ಬೆಂಬಲಕ್ಕೆ ನಿಂತಿದೆ.‘ಈ ವಿದ್ಯಮಾನದ ಮೇಲೆ ನಾವು ನಿರಂತರವಾಗಿ ನಿಗಾ ಇರಿಸಿದ್ದೇವೆ. ಮುಂದೆಯೂ ಈ ಬಗ್ಗೆ ಗಮನ ಹರಿಸಲಿದ್ದೇವೆ’ ಎಂದು ಐಎಂಎಫ್‌ನ ಸಂವಹನ ನಿರ್ದೇಶಕ ಗೆರ್ರಿ ರೈಸ್‌ ಅವರು ಹೇಳಿದ್ದಾರೆ.

ಹಣಕಾಸು ಮಾರುಕಟ್ಟೆಯ ನಿಯಂತ್ರಕ ಮತ್ತು ಕೇಂದ್ರೀಯ ಬ್ಯಾಂಕ್‌ನ ಸ್ವತಂತ್ರ ಕಾರ್ಯನಿರ್ವಹಣೆಯಲ್ಲಿ ಯಾವುದೇ ಸರ್ಕಾರ ಅಥವಾ ಉದ್ದಿಮೆಯು ಮಧ್ಯಪ್ರವೇಶ ಮಾಡದಿರುವ ಸತ್ಸ ಸಂಪ್ರದಾಯವನ್ನು ಎಲ್ಲೆಡೆ ಪಾಲಿಸಿಕೊಂಡು ಬರಲಾಗುತ್ತಿದೆ ’ ಎಂದರು.

ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳ ಕಾರ್ಯನಿರ್ವಹಣೆಯನ್ನು ಅಧಿಕಾರಸ್ಥರು ಕಟುವಾಗಿ ಟೀಕಿಸುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೂ ಅಮೆರಿಕದ ಫೆಡರಲ್‌ ರಿಸರ್ವ್‌ನ ನಿಲುವನ್ನು ಟೀಕಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು