ಷೇರುಪೇಟೆಯಲ್ಲಿ ಖರೀದಿ ಭರಾಟೆ

7

ಷೇರುಪೇಟೆಯಲ್ಲಿ ಖರೀದಿ ಭರಾಟೆ

Published:
Updated:
Deccan Herald

ಮುಂಬೈ: ಜಾಗತಿಕ ಮತ್ತು ಸ್ಥಳೀಯ ಸಕಾರಾತ್ಮಕ ವಿದ್ಯಮಾನಗಳ ಪ್ರಭಾವದಿಂದ ಮುಂಬೈ ಷೇರುಪೇಟೆಯಲ್ಲಿ ಶುಕ್ರವಾರ ಖರೀದಿ ಉತ್ಸಾಹ ಕಂಡು ಬಂದಿತು.

ಕಚ್ಚಾ ತೈಲ ಬೆಲೆ ಇಳಿಕೆ, ಡಾಲರ್‌ ಎದುರಿನ ರೂಪಾಯಿ ಮೌಲ್ಯದಲ್ಲಿ ಗಮನಾರ್ಹ ಹೆಚ್ಚಳ, ಅಮೆರಿಕ ಮತ್ತು ಚೀನಾ ವಾಣಿಜ್ಯ ಸಮರಕ್ಕೆ ಸಂಬಂಧಿಸಿದ ಉದ್ವಿಗ್ನತೆ ಶಮನ ಮತ್ತು ಜಾಗತಿಕ ಷೇರುಪೇಟೆಗಳಲ್ಲಿನ ಚೇತರಿಕೆಯು ಸೂಚ್ಯಂಕವು ದಾಖಲೆ ಪ್ರಮಾಣದಲ್ಲಿ ಏರಿಕೆ ಕಾಣಲು ನೆರವಾಯಿತು.

ಸಂವೇದಿ ಸೂಚ್ಯಂಕವು 580 ಅಂಶಗಳಷ್ಟು ಏರಿಕೆ ದಾಖಲಿಸಿ ಒಂದು ತಿಂಗಳ ಹಿಂದಿನ ಗರಿಷ್ಠ ಮಟ್ಟಕ್ಕೆ ತಲುಪಿತು. ಉತ್ತಮ ಆರಂಭ ಕಂಡ ಸೂಚ್ಯಂಕವು ಗರಿಷ್ಠ 35,190 ಅಂಶಗಳಿಗೆ ತಲುಪಿದ್ದರೂ, ಲಾಭ ಉದ್ದೇಶದ ಮಾರಾಟದಿಂದಾಗಿ ಅಂತಿಮವಾಗಿ  579.68 ಅಂಶಗಳಷ್ಟು ಚೇತರಿಕೆ ಕಂಡು 35,011 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.

 ದೇಶಿ ಮಾರುಕಟ್ಟೆಯಲ್ಲಿ ವಾಹನಗಳ ಮಾರಾಟ ಹೆಚ್ಚಳವು ಸೂಚ್ಯಂಕ ಹೆಚ್ಚಳಕ್ಕೆ ನೆರವಾಯಿತು. ಮಾರುತಿ ಸುಜುಕಿ ಷೇರಿನ ಬೆಲೆ ಶೇ 6.37ರಷ್ಟು ಮತ್ತು ಟಾಟಾ ಮೋಟರ್ಸ್‌ ಶೇ 6.29ರಷ್ಟು ಚೇತರಿಕೆ ಕಂಡವು.

ವಿಪ್ರೊ, ಟಿಸಿಎಸ್‌, ಎಸ್‌ಬಿಐ, ಇನ್ಫೊಸಿಸ್‌ ಮತ್ತು ಸನ್‌ ಫಾರ್ಮಾ ಷೇರುಗಳ ಬೆಲೆ ಶೇ 3.29ರವರೆಗೆ ಕುಸಿತ ದಾಖಲಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !