ತಾಳ್ಮೆ ಪರೀಕ್ಷಿಸದಿರಿ: ಪಾಕ್‌ ಸೇನೆ

7
ಪಾಕಿಸ್ತಾನದಲ್ಲಿ ಮೂರನೇ ದಿನವೂ ಮುಂದುವರಿದ ಪ್ರತಿಭಟನೆ

ತಾಳ್ಮೆ ಪರೀಕ್ಷಿಸದಿರಿ: ಪಾಕ್‌ ಸೇನೆ

Published:
Updated:
Deccan Herald

ಇಸ್ಲಾಮಾಬಾದ್:  ಧರ್ಮನಿಂದನೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕ್ರೈಸ್ತ ಮಹಿಳೆಯನ್ನು ಆರೋಪ ಮುಕ್ತಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಮೂರನೇ ದಿನವಾದ ಶುಕ್ರವಾರವೂ ಪಾಕಿಸ್ತಾನದಾದ್ಯಂತ ತೀವ್ರ ಪ್ರತಿಭಟನೆ ಮುಂದುವರಿಯಿತು. ಈ ನಡುವೆ, ‘ನಮ್ಮ ತಾಳ್ಮೆ ಪರೀಕ್ಷಿಸಬೇಡಿ’ ಎಂದು ಇಸ್ಲಾಂ ಮೂಲಭೂತವಾದಿಗಳಿಗೆ ಸೇನೆ ಎಚ್ಚರಿಕೆ ನೀಡಿದೆ.

‘ಪ್ರತಿಭಟನೆಯನ್ನು ಶಾಂತಿ ಯುತವಾಗಿ ಕೊನೆಗೊಳಿಸಿ, ಬಲಪ್ರಯೋಗಕ್ಕೆ ಅವಕಾಶ ನೀಡಬೇಡಿ. ಭಯೋತ್ಪಾದನೆ ಮತ್ತು ಭದ್ರತೆಯ ಸಮಸ್ಯೆಗಳಿಂದ ದೇಶವನ್ನು ಹೊರ ತರುವುದು ನಮ್ಮ ಮುಖ್ಯ ಉದ್ದೇಶ’ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !