ಶೆಹಜಾದ್‌ಗೆ ಮತ್ತಷ್ಟು ಸಂಕಷ್ಟ

7

ಶೆಹಜಾದ್‌ಗೆ ಮತ್ತಷ್ಟು ಸಂಕಷ್ಟ

Published:
Updated:
Deccan Herald

ಕರಾಚಿ: ನಿಷೇಧಿತ ಉದ್ದೀಪನ ಮದ್ದು ಸೇವನೆ ಆರೋಪದಿಂದ ನಿಷೇಧಕ್ಕೆ ಒಳಗಾಗಿದ್ದ ಪಾಕಿಸ್ತಾನದ ಬ್ಯಾಟ್ಸ್‌ಮನ್‌ ಅಹಮ್ಮದ್ ಶೆಹಜಾದ್‌ ಅವರಿಗೆ ಮತ್ತಷ್ಟು ಸಂಕಷ್ಟ ಕಾದಿದೆ. ಅವರ ನಿಷೇಧದ ಅವಧಿಯನ್ನು ಆರು ತಿಂಗಳು ಹೆಚ್ಚಿಸಲಾಗಿದೆ.

ಅವರ ಮೇಲೆ ಹೇರಲಾದ ನಾಲ್ಕು ತಿಂಗಳ ನಿಷೇಧ ನವೆಂಬರ್‌ 10ರಂದು ಮುಕ್ತಾಯವಾಗಲಿದೆ. ಆದರೆ ನವೆಂಬರ್‌ 11ರಿಂದ ಜಾರಿಯಾಗುವಂತೆ ನಿಷೇಧವನ್ನು ವಿಸ್ತರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.

ಶೆಹಜಾದ್ ಅವರು 13 ಟೆಸ್ಟ್, 81 ಏಕದಿನ ಮತ್ತು 57 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದು ಕಳೆದ ಮೇ ತಿಂಗಳಲ್ಲಿ ಫೈಜಲಾಬಾದ್‌ನಲ್ಲಿ ನಡೆದಿದ್ದ ದೇಶಿ ಏಕದಿನ ಕ್ರಿಕೆಟ್ ಟೂರ್ನಿಯ ಸಂದರ್ಭದಲ್ಲಿ ಉದ್ದೀಪನ ಮದ್ದು ಸೇವಿಸಿದ್ದ ಆರೋಪಕ್ಕೆ ಒಳಗಾಗಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !