ಯಲಹಂಕ: ಇಂದು, ನಾಳೆ ಕಡಲೆಕಾಯಿ ಪರಿಷೆ

7

ಯಲಹಂಕ: ಇಂದು, ನಾಳೆ ಕಡಲೆಕಾಯಿ ಪರಿಷೆ

Published:
Updated:

ಬೆಂಗಳೂರು: ಯಲಹಂಕ ಸಮೀಪದ ವೆಂಕಟಾಲ ಗ್ರಾಮದಲ್ಲಿ ಅಭಯ ಮಹಾಗಣಪತಿ ದೇವಾಲಯದ 6ನೇ ವಾರ್ಷಿಕೋತ್ಸವದ ಅಂಗವಾಗಿ ನ. 3 ಮತ್ತು 4ರಂದು ಕಡಲೆಕಾಯಿ ಪರಿಷೆ ಏರ್ಪಡಿಸಲಾಗಿದೆ. ಶನಿವಾರ ಬೆಳಿಗ್ಗೆ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿಸಿದ ನಂತರ ದೇವಾಲಯದ ಅಕ್ಕಪಕ್ಕದ ಬೀದಿಗಳಲ್ಲಿ ಪರಿಷೆಗೆ ಚಾಲನೆ ದೊರೆಯಲಿದೆ. 

‘ಈಗಾಗಲೆ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ವಿಜಯಪುರ, ಯಶವಂತಪುರ ಮಂಡಿಗಳಿಗೆ ತೆರಳಿ ವರ್ತಕರು ಪರಿಷೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ. ಈ ಬಾರಿ 100ಕ್ಕೂ ಹೆಚ್ಚು ವ್ಯಾಪಾರಿಗಳು ಆಗಮಿಸಬಹುದೆಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ತಿಂಡಿ-ತಿನಿಸುಗಳು. ಮಕ್ಕಳ ಆಟಿಕೆಗಳು ಸೇರಿದಂತೆ ವಿವಿಧ ಮಳಿಗೆಗಳನ್ನು ಸ್ಥಾಪಿಸಲಾಗುವುದು ಎಂದು ದೇವಸ್ಥಾನದ ಆಡಳಿತ
ಮಂಡಳಿಯ ಅಧ್ಯಕ್ಷ ಕೆಂಪೇಗೌಡ ತಿಳಿಸಿದರು.

ಪ್ರೋತ್ಸಾಹಧನ: ಎರಡು ದಿನಗಳ ಪರಿಷೆಯಲ್ಲಿ ಪಾಲ್ಗೊಳ್ಳಲಿರುವ ವ್ಯಾಪಾರಿಗಳಿಗೆ ಕಾಫಿ, ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುವುದು. ವ್ಯಾಪಾರ ಮಾಡುವ ಪ್ರತಿಯೊಬ್ಬರಿಗೂ ₹ 500 ಪ್ರೋತ್ಸಾಹಧನ ನೀಡಲಾಗುವುದು ಎಂದು ಅವರು ತಿಳಿಸಿದರು.

ಮಾಹಿತಿಗೆ: ಮೊ. 9980196440 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !