ಮಹಿಳೆಯರಿಗೆ ಬೆಂಗಳೂರು ಸುರಕ್ಷಿತ ನಗರ: ಆರ್‌.ಕೆ. ದತ್ತ

7

ಮಹಿಳೆಯರಿಗೆ ಬೆಂಗಳೂರು ಸುರಕ್ಷಿತ ನಗರ: ಆರ್‌.ಕೆ. ದತ್ತ

Published:
Updated:
Deccan Herald

ಬೆಂಗಳೂರು: ಮಹಿಳೆಯರಿಗೆ ಬೆಂಗಳೂರು ನಗರ ಸುರಕ್ಷಿತವಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಆರ್‌.ಕೆ. ದತ್ತ ಹೇಳಿದರು.

ವಿಕಾಸಸೌಧದಲ್ಲಿ ಶುಕ್ರವಾರ ನಡೆದ ‘ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸೆ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಕೆಲವು ತಿಂಗಳ ಹಿಂದೆ ಸಮೀಕ್ಷೆಯೊಂದು ಬೆಚ್ಚಿ ಬೀಳಿಸುವ ಮಾಹಿತಿ ನೀಡಿತ್ತು. ಅದರ ಪ್ರಕಾರ, ಬೆಂಗಳೂರು ನಗರದಲ್ಲಿ ಶೇಕಡ 90ರಷ್ಟು ಮಹಿಳೆಯರ ಮೇಲೆ ಲೈಂಗಿಕವಾಗಿ ದೌರ್ಜನ್ಯ ಆಗಬಹುದು ಎಂಬ ಭೀತಿ ವ್ಯಕ್ತಪಡಿಸಿದ್ದರು. ಅಲ್ಲದೆ, ಶೇಕಡ 85ರಷ್ಟು ಮಹಿಳೆಯರು ಸುರಕ್ಷಿತವಲ್ಲದ ನಗರ ಎಂದು ಹೇಳಿದ್ದರು. ಇದು ಗಾಬರಿ ಹುಟ್ಟಿಸುವಂತಿತ್ತು. ಆದರೆ, ಗ್ಲೋಬಲ್‌ ಕನ್ಸರ್ನ್‌ ಇಂಡಿಯಾ ನಿರ್ದೇಶಕಿ ಬೃಂದಾ ಅವರು ಬೆಂಗಳೂರು ಮಹಿಳೆಯರ ಪಾಲಿಗೆ ಸುರಕ್ಷಿತ ನಗರ ಎಂದು ಬೇರೊಂದು ಸಮೀಕ್ಷೆ ಉಲ್ಲೇಖಿಸಿ ಹೇಳಿದ್ದಾರೆ. ಇದು ಸರಿಯಾದ ವಿಶ್ಲೇಷಣೆ ಎಂದು ಪ್ರತಿಪಾದಿಸಿದರು.

ದೌರ್ಜನ್ಯ ಪ್ರಕರಣಗಳಲ್ಲಿ ಅಪರಾಧಿ ಎಂದು ಸಾಬೀತಾದ ಪ್ರಕರಣಗಳು ಬಹಳ ಕಡಿಮೆ ಇದೆ. 2016 ರಲ್ಲಿ 1.22 ಲಕ್ಷ ಪ್ರಕರಣಗಳನ್ನು ವಿಲೇವಾರಿ ಮಾಡಲಾಯಿತು. ಅದರಲ್ಲಿ ಶೇಕಡ 18.9 ರಷ್ಟು ಪ್ರಕರಣಗಳಲ್ಲಿ ಮಾತ್ರ ಅಪರಾಧಿ ಎಂದು ನಿರೂಪಿಸಲು ಸಾಧ್ಯವಾಗಿದೆ ಎಂದರು.

ರಾಜ್ಯದಲ್ಲಿ 2014ರಿಂದ ಇಲ್ಲಿಯವರೆಗೆ, ಮಕ್ಕಳ ಮೇಲಿನ 67 ಲೈಂಗಿಕ ದೌರ್ಜನ್ಯ ಪ್ರಕರಣಗಳ ಪೈಕಿ 2 ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗಿದೆ ಎಂದು ದತ್ತ ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !