ಜೀ ಕುಟುಂಬ ಅವಾರ್ಡ್ಸ್ಇಂದು, ನಾಳೆ ಪ್ರಸಾರ

7
ದೀಪಾವಳಿ ಅಂಗವಾಗಿ ಅದ್ದೂರಿ ಕಾರ್ಯಕ್ರಮ

ಜೀ ಕುಟುಂಬ ಅವಾರ್ಡ್ಸ್ಇಂದು, ನಾಳೆ ಪ್ರಸಾರ

Published:
Updated:
Deccan Herald

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ನ.3 ಮತ್ತು 4ರಂದು ಸಂಜೆ 7.30ಕ್ಕೆ ‘ಜೀ ಕನ್ನಡ ವಾಹಿನಿಯ ಕುಟುಂಬ ಅವಾರ್ಡ್ಸ್‌ – 2018’ ಕಾರ್ಯಕ್ರಮ ಪ್ರಸಾರವಾಗಲಿದೆ. 

 ಹತ್ತಾರು ಮನರಂಜನಾ ಕಾರ್ಯಕ್ರಮಗಳು, ನೂರಾರು ಕಲಾವಿದರು, ಅವರ ಕುಟುಂಬದ ಸದಸ್ಯರು, ಕನ್ನಡ ಚಿತ್ರ ನಟ ನಟಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ದೀಪಾವಳಿ ಹಿನ್ನೆಲೆಯಲ್ಲಿ ಅದ್ದೂರಿ ಕಾರ್ಯಕ್ರಮವಾಗಿ ಪ್ರಸಾರವಾಗಲಿದೆ.

ವರ್ಷಪೂರ್ತಿ ಶ್ರಮಿಸಿದ ಕಲಾವಿದರು ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮವಿದು. 22 ಉತ್ತಮ, 7 ಫೇವರೆಟ್‌  ಮತ್ತು ವಿಶೇಷ ವರ್ಗದ ಪ್ರಶಸ್ತಿಗಳನ್ನು ನೀಡಲಾಗಿದೆ. ‘ಭರವಸೆಯ ಹೊಸ ಮುಖಗಳು’, ‘ಸ್ಮೈಲ್‌ ಐಕಾನ್‌’, ‘ಜೀ ಹೆಮ್ಮೆ’ ಹೆಸರಿನ ಪ್ರಶಸ್ತಿಗಳನ್ನೂ ಕಲಾವಿದರಿಗೆ ನೀಡಲಾಗಿದೆ. 

ವರ್ಣರಂಜಿತ ಈ ವೇದಿಕೆಯಲ್ಲಿ ಸ್ಯಾಂಡಲ್‍ವುಡ್ ತಾರೆಯರಾದ ರಾಗಿಣಿ ದ್ವಿವೇದಿ, ಸಾನ್ವಿ, ಅಜಯ್ ರಾವ್ ಮತ್ತು ಜೀ ಕನ್ನಡ ಧಾರಾವಾಹಿ ಮತ್ತು ರಿಯಾಲಿಟಿ ಶೋ ಪ್ರತಿಭೆಗಳ ನೃತ್ಯ ಪ್ರದರ್ಶನವಿದೆ. ನಟ ಯಶ್‌ ಕೂಡಾ ಭಾಗವಹಿಸಲಿದ್ದಾರೆ ಎಂದು ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !