ಬಂದಿದೆ ‘ರೇರಾ ಫೈಲಿಂಗ್ ತಂತ್ರಜ್ಞಾನ’

7
ಉಂಬರ್‌ ಐಟಿ ಸಲ್ಯೂಷನ್ಸ್‌ನಿಂದ ಅಭಿವೃದ್ಧಿ

ಬಂದಿದೆ ‘ರೇರಾ ಫೈಲಿಂಗ್ ತಂತ್ರಜ್ಞಾನ’

Published:
Updated:
Deccan Herald

ಬೆಂಗಳೂರು: ರಿಯಲ್ ಎಸ್ಟೇಟ್ ವಲಯದ ಬಿಲ್ಡರ್ಸ್‌, ಡೆವಲಪರ್ಸ್‌ ಮಾತ್ರವಲ್ಲದೆ ಗ್ರಾಹಕರ ಅನುಕೂಲಕ್ಕಾಗಿ ಉಂಬರ್ ಐಟಿ ಸಲ್ಯೂಷನ್ಸ್‌ ಎಲ್‌ಎಲ್‌ಪಿ ಸಂಸ್ಥೆಯು ‘ರೇರಾ ಫೈಲಿಂಗ್ ತಂತ್ರಜ್ಞಾನ’ವನ್ನು ಅಭಿವೃದ್ಧಿಪಡಿಸಿದೆ.

ಸಂಸ್ಥೆಯ ನಿರ್ದೇಶಕಿ ಶೀತಲ್ ನಟು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ‘ಐದು ಸಾವಿರ ಚದರ ಅಡಿಗೂ ಹೆಚ್ಚಿನ ಪ್ರದೇಶದಲ್ಲಿ ದೊಡ್ಡ ಕಟ್ಟಡ ನಿರ್ಮಾಣ ಮಾಡುವವರು ಮೊದಲು, ರೇರಾ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಅವರು ಈ ‘ರೇರಾ ತಂತ್ರಜ್ಞಾನ’ದ ನೆರವು ಪಡೆದರೆ ವಿನ್ಯಾಸ, ಕಾಮಗಾರಿ, ಕಟ್ಟಡ ನಿರ್ಮಾಣದ ಹಂತ, ವೆಚ್ಚ, ವಸ್ತುಗಳ ಬಳಕೆ ಸೇರಿದಂತೆ ಎಲ್ಲ ಮಾಹಿತಿ ಪ್ರತಿ 90 ದಿನಕ್ಕೊಮ್ಮೆ ಅಪ್‌ಡೇಟ್ ಆಗಲಿದೆ’ ಎಂದರು.

‘ಈ ತಂತ್ರಜ್ಞಾನ, ಅಮೆಜಾನ್‌ ಕ್ಲೌಡ್‌ ಆಧಾರಿತವಾಗಿದ್ದು, ಸುರಕ್ಷಿತವಾಗಿದೆ. 12ರಿಂದ 300 ನಿವೇಶನಗಳಿರುವ ಗೃಹಗಳ ಸಂಕೀರ್ಣದಂತಹ ಬೃಹತ್‌ ಯೋಜನೆಗಳಿಗೆ ಇದು ಸೂಕ್ತವಾಗಬಲ್ಲದು. ಹಾಗಾಗಿ, ನಿಗಮಗಳು, ಸಂಸ್ಥೆಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು’ ಎಂದು ಸಂಸ್ಥೆಯ ವಿ.ಎನ್‌. ಮಂಜುನಾಥ್‌ ಹೇಳಿದರು.

‘ಈ ತಂತ್ರಜ್ಞಾನ ಬಳಸಲು ಪ್ರತಿಯೊಬ್ಬರಿಗೂ ಲಾಗ್‌ ಇನ್‌ ಐ.ಡಿ ನೀಡಲಾಗುತ್ತದೆ. ಈ ಮೂಲಕ ಡೆವಲಪರ್ಸ್‌ ಹಾಗೂ ಗ್ರಾಹಕರು ರೇರಾದ ಆಗುಹೋಗುಗಳನ್ನು ತಿಳಿದುಕೊಳ್ಳಬಹುದು’ ಎಂದು ಅವರು ತಿಳಿಸಿದರು.

ಸಂಪರ್ಕಕ್ಕೆ: 99454 06954, www.umber-ghar.com

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !