ಇರುವುದರಲ್ಲಿ ತೃಪ್ತಿ ಹೊಂದುವವರೇ ಪರಿಪೂರ್ಣರು:ಶ್ರೀ ಎಂ.

7

ಇರುವುದರಲ್ಲಿ ತೃಪ್ತಿ ಹೊಂದುವವರೇ ಪರಿಪೂರ್ಣರು:ಶ್ರೀ ಎಂ.

Published:
Updated:
Deccan Herald

ಬೆಂಗಳೂರು: ‘ಇರುವುದರಲ್ಲಿಯೇ ತೃಪ್ತಿ ಹೊಂದುತ್ತ, ಪ್ರತಿಕ್ಷಣವೂ ಸನ್ನಡತೆ ತೋರುತ್ತಾ, ಜೀವನಕ್ರಮದಲ್ಲಿ ಒಳಿತನ್ನೇ ಅಳವಡಿಸಿಕೊಂಡಾಗ ಪ್ರತಿಯೊಬ್ಬರು ಪರಿಪೂರ್ಣತೆ ಸಾಧಿಸಬಹುದು’ ಎಂದು ಅಧ್ಯಾತ್ಮ ಚಿಂತಕ ಶ್ರೀ ಎಂ. ಹೇಳಿದರು. 

ಸತ್ಸಂಗ ಪ್ರತಿಷ್ಠಾನವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಉಪನಿಷತ್‌ನಲ್ಲಿನ ಅರಿವಿನ ವಿಚಾರಗಳು’ ಕುರಿತು ಉಪನ್ಯಾಸ ನೀಡಿದರು.

‘ಬಹುತೇಕ ಜನರು ಅದಿಲ್ಲ–ಇದಿಲ್ಲ ಎಂದು ಕೊರಗುತ್ತಿರುತ್ತಾರೆ. ಬಯಸಿದ್ದು ಸಿಕ್ಕಿದಾಗ, ಮತ್ತೊಂದಿಷ್ಟು ಬಯಸುತ್ತಾರೆ. ಗೌತಮ ಬುದ್ಧ ಹೇಳಿದಂತೆ ಆಸೆಯೇ ದುಃಖಕ್ಕೆ ಮೂಲವಾಗುತ್ತದೆ. ಹಾಗಂತ ಎಲ್ಲರೂ ಸನ್ಯಾನಿಗಳು ಆಗಬೇಕೆಂದಿಲ್ಲ’ ಎಂದರು.

‘ನಾವು ತೀವ್ರವಾಗಿ ಬಯಸಿದ್ದು ಸಿಕ್ಕ ಕ್ಷಣದಲ್ಲಿ ಮನ ಸಂತಸದಿಂದ ಇರುತ್ತದೆ. ಆ ಹೊತ್ತು ಮತ್ತಿನ್ನೇನೂ ಬೇಡ ಎಂಬ ಮನಸ್ಥಿತಿ ಬಂದರೆ, ಅಂತ ಮನೋಭಾವವನ್ನೆ ಜೀವನದುದ್ದಕ್ಕೂ ಅಳವಡಿಸಿಕೊಂಡರೆ ಬೇಕಾದಷ್ಟು ತೃಪ್ತಿ ಸಿಕ್ಕೇ ಸಿಗುತ್ತದೆ’ ಎಂದು ಉಪದೇಶ ನೀಡಿದರು. 

‘ಎಲ್ಲರಿಗೂ ಜೀವನದಲ್ಲಿ ಶಾಂತಿ, ಪೂರ್ಣತೆ, ತೃಪ್ತಿ ಬೇಕು. ಅದಕ್ಕಾಗಿ ನಮ್ಮೊಳಗಿನ ನಮ್ಮತನವನ್ನು ನಾವು ಕಂಡುಕೊಳ್ಳಬೇಕು. ಹಾಗಂತ ದಿನಕ್ಕೆ ಅರ್ಧಗಂಟೆ ಧ್ಯಾನ ಮಾಡಿದರೆ ಸಾಲದು. ಅಧ್ಯಾತ್ಮ ಪುಸ್ತಕಗಳನ್ನು ಓದಿದರೆ ಆಗದು. ಇನ್ನೊಬ್ಬರಿಗೆ ತೊಂದರೆ ಆಗದಂತೆ ಬಾಳಬೇಕು. ಎಲ್ಲರೂ, ಎಲ್ಲವೂ ಪವಿತ್ರವೇ ಎಂದು ಭಾವಿಸಬೇಕು. ಕೊರತೆಗಳನ್ನು ಹುಡುಕುತ್ತ ಕೊರಗಬಾರದು. ಆಗ ಮಾತ್ರ ನಮ್ಮತನದ ಅರಿವಿನ ಖಜಾನೆ ತೆರೆದುಕೊಳ್ಳುತ್ತದೆ’ ಎಂದು ಸಲಹೆ ನೀಡಿದರು.

‘ಹೊರಗಿನವರಲ್ಲಿಯೂ ಪೂರ್ಣತೆ ಕಾಣುವ ಮನಸ್ಥಿತಿ ಬಂದರೆ, ನಾವು ಪೂರ್ಣರು ಎಂಬ ಸ್ಥಿತಪ್ರಜ್ಞ ಭಾವ ಮೊಳಕೆಯೊಡೆಯುತ್ತದೆ. ಚಿತ್ತವೃತ್ತಿ ನಿರೋಧಕ್ಕಾಗಿ ಯೋಗಾಭ್ಯಾಸ ಮಾಡಬಹುದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 29

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !