ಅಸ್ತಾನಾ ಲಂಚ ಪ್ರಕರಣ: ಮಧ್ಯವರ್ತಿಗೆ ಜಾಮೀನು ನಕಾರ

7

ಅಸ್ತಾನಾ ಲಂಚ ಪ್ರಕರಣ: ಮಧ್ಯವರ್ತಿಗೆ ಜಾಮೀನು ನಕಾರ

Published:
Updated:
Deccan Herald

ನವದೆಹಲಿ: ಕಡ್ಡಾಯ ರಜೆಯ ಮೇಲೆ ಕಳಿಸಲಾಗಿರುವ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಮಧ್ಯವರ್ತಿ ಮನೋಜ್‌ ಪ್ರಸಾದ್‌ ಅವರಿಗೆ ದೆಹಲಿ ಕೋರ್ಟ್‌ ಶನಿವಾರ ಜಾಮೀನು ನಿರಾಕರಿಸಿದೆ.

ಪ್ರಕರಣದ ವಿಚಾರಣೆ ಹಂತದಲ್ಲಿ ಜಾಮೀನು ನೀಡುವುದು ಸರಿಯಲ್ಲ ಎಂದು ಹೇಳಿದ ಸಿಬಿಐ ವಿಶೇಷ ನ್ಯಾಯಾಧೀಶರು, ಜಾಮೀನು ನಿರಾಕರಿಸಿದರು.

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮನೋಜ್‌ ಪ್ರಸಾದ್‌ ಅವರನ್ನು ಅ. 17 ರಂದು ಬಂಧಿಸಲಾಗಿತ್ತು. ಇದೇ ಪ್ರಕರಣದಲ್ಲಿ ಬಂಧಿಸಲಾಗಿದ್ದ ಮತ್ತೊಬ್ಬ ಆರೋಪಿ, ಸಿಬಿಐನ ಡಿಎಸ್‌ಪಿ ದೇವೇಂದರ್‌ ಕುಮಾರ್‌ ಅವರಿಗೆ ಈಗಾಗಲೇ ಜಾಮೀನು ನೀಡಲಾಗಿದೆ. 

ಅಸ್ತಾನಾ ಹಾಗೂ ಇತರರ ವಿರುದ್ಧ ಹೈದರಾಬಾದ್‌ ಮೂಲದ ಉದ್ಯಮಿ ಸತೀಶ್ ಸನಾ ಎಂಬುವರು ನೀಡಿದ ಲಿಖಿತ ದೂರಿನ ಮೇರೆಗೆ ಅ.15 ರಂದು ಎಫ್‌ಐಆರ್‌ ದಾಖಲಾಗಿದೆ. 

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 1

    Sad
  • 0

    Frustrated
  • 0

    Angry

Comments:

0 comments

Write the first review for this !