ಉಗ್ರ ಸಂಘಟನೆ ಸೇರಿದ ಉತ್ತರ ಪ್ರದೇಶದ ವಿದ್ಯಾರ್ಥಿ

7

ಉಗ್ರ ಸಂಘಟನೆ ಸೇರಿದ ಉತ್ತರ ಪ್ರದೇಶದ ವಿದ್ಯಾರ್ಥಿ

Published:
Updated:
Deccan Herald

ನೋಯ್ಡಾ: ಉತ್ತರಪ್ರದೇಶದ ಗ್ರೇಟರ್ ನೋಯ್ಡಾದ ಶಾರದಾ ವಿಶ್ವವಿದ್ಯಾಲಯದಿಂದ ಕಳೆದ ವಾರ ಕಾಣೆಯಾಗಿದ್ದ ಶ್ರೀನಗರ ವಿದ್ಯಾರ್ಥಿ ಅಹ್ತೆಷಾಮ್‌ ಬಿಲಾಲ್‌ (17) ಇಸ್ಲಾಮಿಕ್‌ ಸ್ಟೇಟ್‌ ಭಯೋತ್ಪಾದಕ ಸಂಘಟನೆಯ ಧ್ವಜದ ಎದುರು ನಿಂತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಭಾರತ ಮತ್ತು ಅಫ್ಗಾನ್‌  ವಿದ್ಯಾರ್ಥಿಗಳ ನಡುವೆ ನಡೆದ ಸಂಘರ್ಷದಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯಾದ ಬಿಲಾಲ್‌ ಒರಟಾಗಿ ವರ್ತಿಸಿದ್ದ. ಇದಾದ ಕೆಲವೇ ದಿನಗಳಲ್ಲಿ ಅಕ್ಟೋಬರ್ 28ರಂದು ದೆಹಲಿಗೆ ತೆರಳುವುದಾಗಿ ಅನುಮತಿ ಪಡೆದು ಹೊರಟಿದ್ದ. 

ಕಾಲೇಜಿಗೆ ಮರಳದಿದ್ದಾಗ ಗ್ರೇಟರ್‌ ನೋಯ್ಡಾದಲ್ಲಿ ನಾಪತ್ತೆ ದೂರು ದಾಖಲಿಸಲಾಗಿತ್ತು.

ಶುಕ್ರವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊದಲ್ಲಿ ಬಿಲಾಲ್‌, ಕಪ್ಪು ಸೂಫಿ ವಸ್ತ್ರವನ್ನು ಧರಿಸಿದ್ದು, ತಲೆಗೂ ಕಪ್ಪು ಬಟ್ಟೆ ಧರಿಸಿದ್ದಾರೆ. ಎದೆ ಮೇಲೆ ಮದ್ದು ಗುಂಡುಗಳನ್ನಿರಿಸುವಚೀಲವನ್ನು ಹಾಕಿಕೊಂಡಿರುವ ಆತನ ಹಿನ್ನಲೆಯಲ್ಲಿ ‘ಇಸ್ಲಾಮಿಕ್‌ ಸ್ಟೇಟ್‌’ನ ಧ್ವಜವಿದೆ.

ಅಕ್ಟೋಬರ್‌ 28ರಿಂದ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದೇವೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ’ ಎಂದು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಹೇಳಿದೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !