ಈಜು: ದಾಮಿನಿ ಗೌಡಗೆ ಚಿನ್ನ

7
ಅಖಿಲ ಭಾರತ ಅಂತರ ವಿ.ವಿ ಮಹಿಳಾ ಈಜು ಚಾಂಪಿಯನ್‌ಷಿಪ್‌

ಈಜು: ದಾಮಿನಿ ಗೌಡಗೆ ಚಿನ್ನ

Published:
Updated:
Deccan Herald

ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ದಾಮಿನಿ ಕೆ. ಗೌಡ ಅವರು ಶನಿವಾರ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಈಜು ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸಹಯೋಗದಲ್ಲಿ ನಡೆಯುತ್ತಿರುವ ಈಜು ಚಾಂಪಿಯನ್‌ಷಿಪ್‌ನ 200 ಮೀಟರ್ಸ್‌ ಬಟರ್‌ಫ್ಲೈ ವಿಭಾಗದಲ್ಲಿ ದಾಮಿನಿ, 2 ನಿಮಿಷ, 29.95 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಜೈನ್‌ ವಿಶ್ವವಿದ್ಯಾಲಯದ ಶ್ರುತಿ ಮಹಾಲಿಂಗಂ ದ್ವಿತೀಯ ಹಾಗೂ ಸಾವಿತ್ರಿಬಾಯಿ ಫುಲೆ ವಿ,ವಿಯ ಬಚಾಡೆ ಆಕಾಂಕ್ಷಾ ತೃತೀಯ ಸ್ಥಾನ ಪಡೆದರು. 

ಫಲಿತಾಂಶಗಳು: 100 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌: ಬಿರ್ನಾಲ್‌ ಯುಗ್‌ (ಸಾವಿತ್ರಿಬಾಯಿ ಫುಲೆ ವಿ.ವಿ;ಕಾಲ–1 ನಿಮಿಷ, 09.56 ಸೆಕೆಂಡು)–1, ಮೀನಾಕ್ಷಿ ವಿ.ಕೆ.ಅರ್‌ (ಜೈನ್‌ ವಿ.ವಿ)–2, ದಾಮಿನಿ ಕೆ.ಗೌಡ (ರಾಜೀವ್‌ ಗಾಂಧಿ ವಿ.ವಿ)–3.

100 ಮೀಟರ್ಸ್‌ ಫ್ರೀಸ್ಟೈಲ್‌: ಶಿವಾನಿ ಕಠಾರಿಯಾ (ದೆಹಲಿ ವಿ.ವಿ;ಕಾಲ–59.92 ಸೆಕೆಂಡು)–1, ದೂರಿ ಸಾಧ್ವಿ (ಸಾವಿತ್ರಿಬಾಯಿ ಫುಲೆ ವಿ.ವಿ)–2, ದೀಕ್ಷಾ ರಮೇಶ್‌ (ಜೈನ್‌ ವಿ.ವಿ)–3. 200 ಮೀಟರ್ಸ್‌ ಮಿಡ್ಲೆ: ಬಿರ್ನಾಲ್‌ ಯುಗ್‌ (ಸಾವಿತ್ರಿಬಾಯಿ ಫುಲೆ ವಿ.ವಿ; ಕಾಲ–2 ನಿಮಿಷ, 31.65 ಸೆಕೆಂಡು)–1, ಮೀನಾಕ್ಷಿ ವಿ.ಕೆ.ಆರ್‌ (ಜೈನ್ ವಿ.ವಿ;ಕಾಲ–2 ನಿಮಿಷ, 33.01 ಸೆಕೆಂಡು)–2, ದಾಮಿನಿ ಕೆ.ಗೌಡ (ರಾಜೀವ್‌ ಗಾಂಧಿ ವಿ.ವಿ)–3.

200 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌: ಸಕ್ಸೇನಾ ಕಲ್ಯಾಣಿ ಅಜಯ್‌ಭಾಯಿ (ವೀರ್‌ ನರ್ಮದಾ ವಿ.ವಿ; ಕಾಲ–2 ನಿಮಿಷ, 48.3 ಸೆಕೆಂಡು)–1, ಜ್ಯೋತಿ ಪಾಟೀಲ್‌ (ಮುಂಬೈ ವಿ.ವಿ)–2, ಆರತಿ ಪಾಟೀಲ್‌ (ಮುಂಬೈ ವಿ.ವಿ)–3.

200 ಮೀಟರ್ಸ್‌ ಬಟರ್‌ಫ್ಲೈ: ದಾಮಿನಿ ಕೆ.ಗೌಡ (ರಾಜೀವ್‌ ಗಾಂಧಿ ವಿ.ವಿ;ಕಾಲ–2 ನಿಮಿಷ, 29.95 ಸೆಕೆಂಡು)–1, ಶ್ರುತಿ ಮಹಾಲಿಂಗಂ (ಜೈನ್‌ ವಿ.ವಿ)–2, ಬಚಾಡೆ ಆಕಾಂಕ್ಷಾ (ಸಾವಿತ್ರಿಬಾಯಿ ಫುಲೆ)–3. 4X100 ಮೀಟರ್ಸ್‌ ಮಿಡ್ಲೆ: ಸಾವಿತ್ರಿಬಾಯಿ ಫುಲೆ ವಿ.ವಿ (ಕಾಲ–4 ನಿಮಿಷ, 52 ಸೆಕೆಂಡು)–1, ಜೈನ್‌ ವಿ.ವಿ–2, ದೆಹಲಿ ವಿ.ವಿ–3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !